ಸರಕು ಸಾಗಣೆಗೆ ಅನುಕೂಲ
ಗುಂತಕಲ್-ವಾಡಿ ಮಾರ್ಗವನ್ನು ನಾಲ್ಕು ಮಾರ್ಗಗಳಾಗಿ ಪರಿವರ್ತಿಸುವ ಮೂಲಕ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರ ಸಂಚಾರದ ಜತೆಗೆ ಸರಕು ಸಾಗಣೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಮತ್ತು ಪ್ರಯಾಣಿಕ ರೈಲುಗಳ ವೇಗವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ರೈಲ್ವೆ ಮಾರ್ಗಗಳ ಸಂಪರ್ಕವನ್ನು ಹೆಚ್ಚಿಸುವ ಮತ್ತು ಕಲ್ಲಿದ್ದಲು, ಉಕ್ಕು, ಸಿಮೆಂಟ್, ಗ್ರಾನೈಟ್, ಬಾಕ್ಸೈಟ್ ಖನಿಜಗಳು ಮತ್ತು ಸರಕುಗಳನ್ನು ವಿದ್ಯುತ್, ಸಿಮೆಂಟ್ ಮತ್ತು ಇತರ ಕೈಗಾರಿಕಾ ಕೇಂದ್ರಗಳಿಗೆ ಸಾಗಿಸುವ ಮೂಲಕ ಲಾಭ ಗಳಿಸುವ ಗುರಿಯೊಂದಿಗೆ ರೈಲ್ವೆ ಈ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ಜೆಎಸ್‌ಡಬ್ಲ್ಯೂ, ಕಲ್ಯಾಣಿ ಸ್ಟೀಲ್ಸ್, ಅಲ್ಟ್ರಾ ಟೆಕ್ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಮತ್ತು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್)ಗಳಿಗೆ ಸರಕು ಸಾಗಣೆ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು. 2031ರ ವೇಳೆಗೆ ನಾಲ್ಕು ಪಟ್ಟು ರೈಲು ಮಾರ್ಗ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಿದೆ.