ಸಿರವಾರ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಶಾಸಕ ಜಿ.ಹಂಪಯ್ಯ ನಾಯಕ ಅವರು ಸಿರವಾರ-ಬೆಂಗಳೂರು ಸ್ಲೀಪರ್ ಬಸ್‌ಗೆ ಹಸಿರು ನಿಶಾನೆ ತೋರಿದರು. ಪಪಂ ಸದಸ್ಯರಾದ ಮೌಲಸಾಬ್ ವರ್ಚಸ್, ಸೂರಿ ದುರಗಣ್ಣ ನಾಯಕ, ಹಸೇನ್ ಅಲಿ ಸಾಬ್ ಇತರರಿದ್ದರು.
Published on:
Copied
Follow Us
ಸಿರವಾರ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಸಾರಿಗೆ ಸಂಸ್ಥೆಯಿಂದ ಸಿರವಾರ-ಬೆಂಗಳೂರು ಸ್ಲೀಪರ್ ಬಸ್ ಸೌಲಭ್ಯ ಕಲ್ಪಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸಿರವಾರ-ಬೆಂಗಳೂರು ಸ್ಲೀಪರ್ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು. ಇನ್ನೂ ಎರಡು ಮಾರ್ಗಗಳಿಗೆ ಶೀಘ್ರವೇ ಬಸ್‌ಗಳನ್ನು ಬಿಡಲಾಗುವುದು. ಸಿರವಾರದಲ್ಲಿ ಬಸ್ ಡಿಪೋ ಸ್ಥಾಪಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.