ರಾಯಚೂರು ಹೊಸ ವರ್ಷದ ಆರಂಭದಲ್ಲೇ ಜಿಲ್ಲೆಗೆ ವರುಣನ ಆಗಮನವಾಗಿದ್ದು, ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ತಂಪು ನೀಡಿದೆ.
ಮಂಗಳವಾರ ರಾತ್ರಿ ಹಾಗೂ ಬುಧವಾರಜಿಲ್ಲಾದ್ಯಂತ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭರ್ಜರಿ ಮಳೆಯಾಗಿದೆ. ನಗರ ಸೇರಿದಂತೆ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಮಸ್ಕಿ,ದೇವರ್ದು ಹಾಗೂ ಅರಕೇರಾ ಭಾಗದಲ್ಲಿ ಆಲಿಕಲ್ಲು ಮಳೆಯಾದರೆ ಉಳಿದ ತಾಲೂಕು ಪ್ರದೇಶದಲ್ಲು ಗುಡುಗು ಸಹಿತ ಮಳೆಯಾಗಿದೆ.
ಈ ಮಳೆಯು ಕೃಷಿ ವಲಯದಲ್ಲಿ ಮುಂಬರುವ ಬೇಸಿಗೆ ಬೆಳೆಗಾಗಿ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ ರೈತರಲ್ಲಿ ಈ ಮಳೆ ಹೊಸ ಭರವಸೆ ಮೂಡಿಸಿದೆ. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗುವುದರಿಂದ ಬಿತ್ತನೆಗೆ ಅನುಕೂಲವಾಗಲಿದೆ ಎಂಬುದಾಗಿ ರೈತರು ಸಂತಸ ಹಂಚಿಕೊಂಡಿದ್ದಾರೆ.
ಕಳೆದ 24 ಗಂಟೆಯಲ್ಲಿ ಒಟ್ಟು 3.5 ಮಿ.ಮೀ ಮಳೆ ವರದಿಯಾಗಿದ್ದು, ಸಿರವಾರದಲ್ಲಿ 5.5 ಮಿ.ಮೀ, ಮಸ್ಕಿಯಲ್ಲಿ 1.9 ಮಿ.ಮೀ, ಸಿಂಧನೂರು 5.9 ಮಿ.ಮೀ, ರಾಯಚೂರು 01 ಮಿ.ಮೀ,ಮಾನ್ವಿ 2.2 ಮಿ.ಮೀ, ಲಿಂಗಸುಗೂರಿನಲ್ಲಿ 0.6 ಮಿ.ಮೀ. ಹಾಗೂ ದೇವದುರ್ಗದಲ್ಲಿ 7.4 ಮಿ.ಮೀ ಅತಿಒ ಹೆಚ್ಚು ಮಳೆಯ ವರದಿಯಾಗಿದೆ.