ರಾಯಚೂರು ರಸ್ತೆಯಲ್ಲಿರುವ ಟಿಸಿ ದುರಸ್ತಿ ಕೇಂದ್ರದ ಪಕ್ಕದಲ್ಲಿರುವ ಹೊಲದಲ್ಲಿ ಕಸ ಸುಡಲು ಹಚ್ಚಿದ ಬೆಂಕಿಯ ಕಿಡಿ ಗಾಳಿಗೆ ದುರಸ್ತಿ ಕೆಂದ್ರ ಪಕ್ಕದಲ್ಲಿರುವ ಕಸಕ್ಕೆ ಬಿದ್ದ ಪರಿಣಾಮ ಟಿಸಿ ಆಯಿಲ್, ವಿದ್ಯುತ್ ಪರಿವರ್ತಕ ಸುಟ್ಟು ಅಪಾರ ನಷ್ಟವಾಗಿದೆ. ಸ್ಥಳಕ್ಕೆ ಅರಕೇರಾ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿತು.