ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ

ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳ.
ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳ.
Published on
ದೇವದುರ್ಗ: ತಾಲೂಕಿನ ನದಿದಂಡೆ ಗ್ರಾಮ ಗೂಗಲ್‌ನ ಶ್ರೀ ವಿಶ್ವಗಂಗಾ ಕಾಟನ್ ಜಿನ್ನಿಂಗ್ ಹಾಗೂ ಪ್ರೆಸ್ಸಿಂಗ್ ಫ್ಯಾಕ್ಟರಿಯಲ್ಲಿ ಗುರುವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಹತ್ತಿ ಸುಟ್ಟು ಭಸ್ಮವಾಗಿದೆ. 
ಬೆಂಕಿ ಕೆನ್ನಾಲಗೆಗೆ ಸುಮಾರು 700 ಬೇಲ್‌ನಷ್ಟು ಹತ್ತಿ ಸುಟ್ಟಿದೆ. ವಿಷಯ ತಿಳಿದು ಪಟ್ಟಣ ಹಾಗೂ ಯಾದಗಿರಿ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಜಿನ್ನಿಂಗ್‌ನಲ್ಲಿ 4 ಸಾವಿರ ಕ್ವಿಂಟಾಲ್‌ಗಿಂತಲೂ ಅಧಿಕ ಹತ್ತಿ ಸಂಗ್ರಹವಿತ್ತು. 
ಮಧ್ಯಾಹ್ನ 2ಗಂಟೆಗೆ ಶಾರ್ಟ್‌ಸರ್ಕ್ಯೂಟ್ ಉಂಟಾಗಿದ್ದು ನೋಡನೋಡುತ್ತಿದ್ದಂತೆ ಬೆಂಕಿ ವ್ಯಾಪಿಸಿದೆ. ಪಟ್ಟಣದಿಂದ 30 ಕಿಮೀ, ಯಾದಗಿರಿಯಿಂದ 40ಕಿಮೀ ದೂರವಿರುವ ಗೂಗಲ್‌ಗೆ ಅಗ್ನಿಶಾಮಕದಳದ ಸಿಬ್ಬಂದಿ ಬರುವುದು ತಡವಾಗಿದೆ. 
ಹೀಗಾಗಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಜಿನ್ನಿಂಗ್ ನವೀನ್‌ರಾಜ್ ಎನ್ನುವವರದ್ದಾಗಿದೆ. ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net