ಪಿಎಚ್‌ಸಿಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಿ

ಮಾನ್ವಿಯಲ್ಲಿ  ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಜನವೇದಿಕೆ ಮತ್ತು ಕರ್ನಾಟಕ ಜನಾರೋಗ್ಯ ಚಳವಳಿ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿತು. ಪ್ರಮುಖರಾದ ಜಯಕಾಂತಮ್ಮ, ರವೀಂದ್ರ, ಲಕ್ಷ್ಮಣ ಜಾನೇಕಲ್, ಬಸವಲಿಂಗಮ್ಮ, ನಾಗಮ್ಮ, ಲಕ್ಷ್ಮೀ ಇತರರಿದ್ದರು.

Published on
ಮಾನ್ವಿ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿ ಜನವೇದಿಕೆ ಹಾಗೂ ಕರ್ನಾಟಕ ಜನಾರೋಗ್ಯ ಚಳವಳಿಯಿಂದ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಲಾಯಿತು.
ಸಂಚಾಲಕಿ ಜಯಕಾಂತಮ್ಮ ಮಾತನಾಡಿ, ಪಿಎಚ್‌ಸಿಯಲ್ಲಿ ವೈದ್ಯರು, ನರ್ಸ್, ಪ್ರಯೋಗಾಲಯ ತಂತ್ರಜ್ಞರು, ಔಷಧ ವಿತರಕರ ಹುದ್ದೆಗಳು ಖಾಲಿ ಇವೆ. ಮೂಲಸೌಕರ್ಯ, ಔಷಧ ಮತ್ತು ತುರ್ತು ಸೇವೆಗಳನ್ನು ಒದಗಿಸಬೇಕು. ಗರ್ಭಿಣಿಯರಿಗೆ ಡಟ್ಸಾ ಮಾದರಿಯಲ್ಲಿ ಐಎಫ್‌ಎ ಮಾತ್ರೆಗಳನ್ನು ನೀಡಬೇಕು. ಪ್ರತಿ ತಿಂಗಳು 9ನೇ ತಾರೀಖಿನಂದು ಪಿಎಂಎಸ್ ಗರ್ಭಪೂರ್ವ ಕ್ಲಿನಿಕ್‌ಗಳಲ್ಲಿ ಪ್ರಸೂತಿ ತಜ್ಞರಿಂದ ಚಿಕಿತ್ಸೆ ಕೊಡಿಸಬೇಕು. ಗರ್ಭಪೂರ್ವ ಆರೈಕೆ, ಪೌಷ್ಟಿಕ ಮತ್ತು ಸುರಕ್ಷಿತ ಪ್ರಸವ ಸೇರಿ ತಾಯಂದಿರ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕು. ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ವಿತರಿಸಬೇಕು. ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ಆರೋಗ್ಯ ಸಮಿತಿ ರಚಿಸಿ, ಸಾರ್ವಜನಿಕರ ಆರೋಗ್ಯ ಬಲಪಡಿಸುವುದು ಜನರ ಮೂಲಭೂತ ಹಕ್ಕು ಹಾಗೂ ಸರ್ಕಾರದ ಕರ್ತವ್ಯವಾಗಿದೆ ಎಂದರು.ಪ್ರಮುಖರಾದ ರವೀಂದ್ರ, ಲಕ್ಷ್ಮಣ ಜಾನೇಕಲ್, ಬಸವಲಿಂಗಮ್ಮ, ನಾಗಮ್ಮ, ಲಕ್ಷ್ಮೀ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net