ಬೇಸಿಗೆ ಬೆಳೆ ನೀರಿಗಾಗಿ ನ.25ರಂದು ಹೋರಾಟ

ಚಂದ್ರಭೂಪಾಲ್ ನಾಡಗೌಡ
ಚಂದ್ರಭೂಪಾಲ್ ನಾಡಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ಪ್ರಮುಖ ಚಂದ್ರಭೂಪಾಲ ನಾಡಗೌಡ ಮಾಹಿತಿ
  • ,ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗಿ
ಸಿಂಧನೂರು: ಬೇಸಿಗೆ ಬೆಳೆಗೆ ನೀರು ಮತ್ತು ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ನಾಲ್ಕು ಜಿಲ್ಲೆಗಳನ್ನು ಒಳಗೊಂಡಂತೆ ನಗರದಲ್ಲಿ ನ.25 ಪ್ರತಿಭಟನೆ ಹಮ್ಮಿಕೊಂಡಿದ್ದು,ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಮುಖ ಚಂದ್ರಭೂಪಾಲ್ ನಾಡಗೌಡ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ವೆಂಕಟರಾವ ನಾಡಗೌಡ ನೇತೃತ್ವದಲ್ಲಿ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಗಳ ರೈತರೊಂದಿಗೆ ಹೋರಾಟ ನಡೆಸಲಾಗುತ್ತಿದೆ. ಬೇಸಿಗೆ ಬೆಳೆಗಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಬಿಡುತ್ತಿಲ್ಲ. ಬೆಳೆ ಇಲ್ಲವಾದರೆ 10 ಸಾವಿರ ಕೋಟಿ ರೂ. ನಷ್ಟವಾಗುತ್ತದೆ. 
ತೆಲಂಗಾಣದಲ್ಲಿ ಎಂಎಸ್‌ಪಿ ದರಕ್ಕೆ ಭತ್ತ ಖರೀದಿಸಿ, ಹೆಚ್ಚುವರಿಯಾಗಿ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ನಮ್ಮಲ್ಲಿ ಭತ್ತದ ದರ ಕುಸಿದರೂ ಇದುವರೆಗೆ ಖರೀದಿ ಕೇಂದ್ರ ತೆಗೆದಿಲ್ಲ. ಹೀಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು. 
ಪ್ರಮುಖರಾದ ಅಶೋಕಗೌಡ ಗದ್ರಟಗಿ, ಧರ್ಮನಗೌಡ ಮಲ್ಕಾಪುರ, ಜಿ.ಸತ್ಯನಾರಾಯಣ, ಜಿಲಾನಿಪಾಷಾ, ದೇವೇಂದ್ರಗೌಡ, ಅಲ್ಲಮಪ್ರಭು ಪೂಜಾರ, ಚಂದ್ರುಮೈಲಾರ, ಜೆಡಿಎಸ್ ನಗರ ಘಟಕ ಅಧ್ಯಕ್ಷ ರವಿ ಪನ್ನೂರು, ಆಸೀಫ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net