ಗಾಯದ ಮೇಲೆ ಬರೆ: ರಾಜ್ಯ ಸರ್ಕಾರ ಮುಂಗಾರು ಮಳೆ ಆರಂಭಗೊಳ್ಳುವ ಮೊದಲೇ ರಸಗೊಬ್ಬರ ನೀಡಲು ಎಫ್‌ಐಡಿ ಕಡ್ಡಾಯ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸುಮಾರು ವರ್ಷಗಳಿಂದ ಅರಣ್ಯ ಭೂಮಿ, ಬಗರ್ ಹುಕುಂ, ಗುತ್ತಿಗೆಗೆ ಭೂಮಿ ಪಡೆದ, ಹಕ್ಕುಪತ್ರ ಇಲ್ಲದ ಹಾಗೂ ದಾಖಲೆಗಳಿಲ್ಲದ ಜಮೀನುಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿರುವ ರೈತರಿಗೆ ತೊಂದರೆಯಾಗಲಿದ್ದು ಹೊಸ ನಿಯಮ, ನಿಬಂಧನೆಗಳ ಬಗ್ಗೆ ರೈತರಿಗೆ ಮಾಹಿತಿ ಇಲ್ಲದೆ ತೊಂದರೆ ಎದುರಾಗಿದೆ.