ಫೆ.1ರಂದು ತಿಂಥಣಿ ಬ್ರಿಡ್ಜ್ ಮಠಕ್ಕೆ ಸಿಎಂ ಭೇಟಿ

ಬಸವರಾಜ ಡೋಣಮರಡಿ
ಬಸವರಾಜ ಡೋಣಮರಡಿ
Published on
ಮಸ್ಕಿ: ತಿಂಥಣಿ ಬ್ರಿಡಜ್ ಕಾಗಿನೆಲೆ ಕನಕ ಗುರುಪೀಠದಲ್ಲಿ ಮಾ.31ರಂದು ಸಿದ್ಧರಾಮಾನಂದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ ಜರುಗಲಿದೆ. ಅಂದು ರಾಜ್ಯದ ವಿವಿಧ ಮಠಗಳ 150ಕ್ಕೂ ಹೆಚ್ಚು ಜನ ಸ್ವಾಮೀಜಿಗಳು ಆಗಮಿಸಲಿದ್ದಾರೆ ಎಂದು ಕುರುಬರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಡೋಣಮರಡಿ ವಕೀಲ ಹೇಳಿದರು. 
ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಫೆ.1ರಂದು ತಿಂಥಣಿ ಬ್ರಿಡ್ಜ್‌ನ ಶ್ರೀಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಕುರುಬ ಸಮಾಜದ ಮುಖಂಡರು ಸೇರಿದಂತೆ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. 
ಮಸ್ಕಿ ತಾಲೂಕಿನಿಂದ ಹೆಚ್ಚು ಜನ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ನೂತನ ಸ್ವಾಮೀಜಿ ಆಯ್ಕೆ, ಸಿದ್ದರಾಮಾನಂದಪುರಿ ಸ್ವಾಮೀಜಿ ನಡೆಸುತ್ತಿದ್ದ ಚಟುವಟಿಕೆಗಳ ಮುಂದುವರಿಕೆ ಕುರಿತು ಚಿಂತನ ಮಂಥನ ನಡೆಯಲಿದೆ ಎಂದು ತಿಳಿಸಿದರು. 
ಮುಖಂಡರಾದ ಕರಿಯಪ್ಪ ಹಾಲಾಪುರ, ಮಲ್ಲಯ್ಯ ಅಂಬಾಡಿ, ಮಳ್ಳಪ್ಪ ಮಸ್ಕಿ, ದುರುಗೇಶ ವಕೀಲ, ಬಸವರಾಜ ವಂದಲಿ, ಮಲ್ಲಪ್ಪ ನಿಲೋಗಲ್ ಇತರರಿದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net