ವಿದ್ಯುತ್ ಇಲ್ಲದೆ ಬೆಳೆ ಹಾಳಾಗುವ ಭೀತಿ

ಜರದಬಂಡಿ ಗ್ರಾಮದಲ್ಲಿ ಸುಟ್ಟಿರುವ ವಿದ್ಯುತ್ ಪರಿವರ್ತಕ.
ಜರದಬಂಡಿ ಗ್ರಾಮದಲ್ಲಿ ಸುಟ್ಟಿರುವ ವಿದ್ಯುತ್ ಪರಿವರ್ತಕ.
Published on
ಅರಕೇರಾ: ತಾಲೂಕಿನ ಮುಷ್ಟೂರು ಗ್ರಾಪಂ ವ್ಯಾಪ್ತಿಯ ಜರದಬಂಡಿ ಗ್ರಾಮದ ಸ.ನಂ. 22 ರಲ್ಲಿರುವ 63 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಸುಟ್ಟು 20 ದಿನಗಳಾದರೂ ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. 
ಈ ಪರಿವರ್ತಕದ ಮೂಲಕ ಸುಮಾರು 20 ಎಕರೆ ಜಮೀನುಗಳಿಗೆ ವಿದ್ಯುತ್ ಸರಬರಾಜು ಆಗುತ್ತಿದ್ದು, ಹತ್ತಕ್ಕೂ ಹೆಚ್ಚು ಮನೆಗಳೂ ಅವಲಂಬಿಸಿವೆ. ಟಿಸಿ ದುರಸ್ತಿಗೆ ಜೆಸ್ಕಾಂ ಅಧಿಕಾರಿಗಳಿಗೆ ರೈತರು ತಿಳಿಸಿದ್ದಾರೆ. 63 ಕೆ.ವಿ ಸಾಮರ್ಥ್ಯದ ಟಿಸಿ ಮಂಜೂರಾಗಿದೆ. ಆದರೆ, ವಿತರಣೆಯಲ್ಲಿ ವಿಳಂಬವಾಗುತ್ತಿದೆ.
 ಸ್ಟಾಕ್ ಕೊರತೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇದರಿಂದ ಶೇಂಗಾ, ಸಜ್ಜೆ, ಉಳ್ಳಾಗಡ್ಡಿ ಸೇರಿದಂತೆ ವಿವಿಧ ಬೆಳೆಗಳು ನೀರಾವರಿ ಸೌಲಭ್ಯವಿಲ್ಲದೆ ಹಾಳಾಗುವ ಭೀತಿ ಕಾಡುತ್ತಿದೆ. ಕೂಡಲೇ ಟಿಸಿ ದುರಸ್ತಿ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. 
"

ಕೋಟ್ 01 ಒಂದು ವಾರದ ಹಿಂದೆ ರೈತರು ವಿದ್ಯುತ್ ಪರಿವರ್ತಕ ಸುಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 63 ಕೆವಿ ಸಾಮರ್ಥ್ಯದ ಹೊಸ ಟಿಸಿ ಬೇಡಿಕೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೇವೆ. ಮಂಜೂರು ಕೂಡ ಆಗಿದೆ. ಆದರೆ, ಸ್ಟಾಕ್ ಕೊರತೆ ಇದೆ. ಸ್ಟಾಕ್ ಬಂದ ಕೂಡಲೇ ವಿಳಂಬವಿಲ್ಲದೆ ವಿತರಣೆ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net