ಮಳೆಗಾಗಿ ದೇವರ ಮೊರೆ ಹೋದ ರೈತರು

ಅರಕೇರಾ ಪಟ್ಟಣದ ಸೂಗೂರೇಶ್ವರ ದೇವಸ್ಥಾನದಲ್ಲಿ ಭಕ್ತರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್‌ಪಾಟೀಲ್, ಎಐಸಿಸಿ ಮಹಿಳಾ ಕಾರ್ಯದರ್ಶಿ ಶ್ರೀದೇವಿ ನಾಯಕ, ಪ್ರಮುಖರಾದ ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ, ಪರಮೇಶ ಪೂಜಾರಿ, ಶೇಖರಪ್ಪ ಗೌಡ ಮಾಲಿಪಾಟೀಲ್, ವರದರಾಜ ನಾಯಕ ಇತರರಿದ್ದರು. ಹಾಗೂ ಸಿರವಾರ ಪಟ್ಟಣದ ಮರಾಠಾ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮಳೆಗಾಗಿ ಮುಸ್ಲಿವರು ಸಾಮೂಹಿಕ ಪ್ರಾರ್ಥನೆ ಮಾಡುತ್ತಿರುವುದು.

Published on

ಪ್ರಮುಖ ಮುಖ್ಯಾಂಶಗಳು

  • ಅರಕೇರಾ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಕೆ
  • ಸಿರವಾರದಲ್ಲಿ ವಿಶೇಷ ನಮಾಜ್
ಅರಕೇರಾ: ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರು ಉತ್ತಮ ಮಳೆಯಾಗಲಿ ಎಂದು ಪ್ರಮುಖ ದೇವಸ್ಥಾನಗಳಿಗೆ ಪಾದಯಾತ್ರೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.
ಐದು ಕಿಮೀ ದೂರದ ಊಟಿ ಬಸವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಂದ ಪವಿತ್ರ ಉದಕ ತಂದು ಗ್ರಾಮದ ಸೂಗೂರೇಶ್ವರ ದೇವಸ್ಥಾನ, ಗುಡ್ಡದಲ್ಲಿರುವ ಭಾಗಮ್ಮ ದೇವಸ್ಥಾನ ಹಾಗೂ ಗ್ರಾಮದ ಮುಖ್ಯ ದ್ವಾರದಲ್ಲಿರುವ ಭಾಗಮ್ಮ ದೇವಿ ಮತ್ತು ಮಾರೆಮ್ಮ ದೇವಿ ದೇವಸ್ಥಾನಗಳಲ್ಲಿ ಜಲಾಭಿಷೇಕ ನೆರವೇರಿಸಿದರು.
ಡೊಳ್ಳು-ಮೇಳದೊಂದಿಗೆ ದೇವಸ್ಥಾನಗಳಿಗೆ ತೆರಳಿದ ಭಕ್ತರು ಕಾಯಿ, ಕರ್ಪೂರ, ಮಂಗಳಾರತಿ ಸಲ್ಲಿಸಿ ಉತ್ತಮ ಮಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಿದರು. ನಂತರ ಮಳೆ ಆಗಮಿಸಿದ್ದು, ಭಕ್ತರು ದೇವರ ಮೊರೆ ಹೋಗಿದ್ದು ಸಾರ್ಥಕವಾಯಿತು ಎಂದು ಹರ್ಷವ್ಯಕ್ತಪಡಿಸಿದರು.
ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್‌ಪಾಟೀಲ್. ಎಐಸಿಸಿ ಮಹಿಳಾ ಕಾರ್ಯದರ್ಶಿ ಶ್ರೀದೇವಿ ನಾಯಕ, ಪ್ರಮುಖರಾದ ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ, ಪರಮೇಶ ಪೂಜಾರಿ, ಶೇಖರಪ್ಪ ಗೌಡ ಮಾಲಿಪಾಟೀಲ್, ವೆಂಕೋಬ ದೊರೆ, ವರದರಾಜ ನಾಯಕ, ನಿಂಗಪ್ಪ ಭೋಜೆ, ಬೂದೆಪ್ಪ ಪರಸಲ್, ಸಿದ್ದಪ್ಪ ಪೈಕಾರ್, ಮುದುಕಪ್ಪ ಮೆಣಸಿನಕಾಯಿ, ಸಿದ್ದಪ್ಪ ಕುಂಬಾರ, ಕ್ವಾಟೆಪ್ಪ ಕಬ್ಬೇರ, ಬಾಲಗೌಡ ಸಾತಲ್, ಚನ್ನಪ್ಪ ತೆಗ್ಗಿನಮನಿ, ಶಿವಪ್ಪ ಬಾಡ್ಲ, ವಿರೇಶ ಮ್ಯಾಕಲ್, ವೆಂಕೋಬ ಗೌರ್ಮೆಂಟ್, ಹನುಮಂತ್ರಾಯ, ಅಮರೇಶ ಪೈಕಾರ ಹಾಗೂ ರೈತರಿದ್ದರು.
ಸಿರವಾರ: ಈದ್ಗಾ ಮೈದಾನದಲ್ಲಿ ಮುಸ್ಲಿಮರು ವಿಶೇಷ ನಮಾಜ್ ಮಾಡುವುದರ ಮೂಲಕ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದರು. ಶುಕ್ರವಾರ ಮಸೀದಿಗಳಲ್ಲಿ ನಮಾಜ್ ಮುಗಿಸಿಕೊಂಡು ನಂತರ ಮರಾಠಾ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಧರ್ಮಗುರುಗಳಾದ ಆಸೀಫ್ ರಿಯಾಜ್, ರಹೀಮ್ ಸಾಬ್, ಇಮ್ರಾನ್, ಮಹಿಬೂಬ್ ಅವರು ಪ್ರಾರ್ಥನೆ ಮಾಡಿಸುವುದರ ಮೂಲಕ ದೇವರಲ್ಲಿ ಕೋರಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net