ಗಾಳಿ ಯಂತ್ರಗಳಿಂದ ರೈತರಿಗೆ ತೊಂದರೆ

ಲಿಂಗಸುಗೂರು-ಮಸ್ಕಿ ರೈತರ ಒಕ್ಕೂಟದಿಂದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಒಕ್ಕೂಟದ ರೈತ ಮುಖಂಡ ಈರಣ್ಣ ಗುಡಿಹಾಳ, ಸೋಮನಗೌಡ ಚಿಕ್ಕ ಯರದಿಹಾಳ, ಗುರುಮೂರ್ತಿ, ರಾಮಣ್ಣ, ಕಲ್ಲಪ್ಪ ಜಾಂತಾಪೂರ, ಕುಪ್ಪಣ್ಣ, ಅಮರೇಗೌಡ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಬ್ದಮಾಲಿನ್ಯ
  • ತೊಂದರೆ
  • ಬಸವಣೆಪ್ಪ ಕಲಶೆಟ್ಟಿ

ಲಿಂಗಸುಗೂರು: ಜಮೀನಿನಲ್ಲಿ ಅಳವಡಿಸಿರುವ ಗಾಳಿಯಂತ್ರಗಳಿಂದ ತೊಂದರೆಯಾಗಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಲಿಂಗಸುಗೂರು, ಮಸ್ಕಿ ರೈತರ ಒಕ್ಕೂಟದಿಂದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಗಾಳಿಯಂತ್ರಗಳಿಂದ ಪಕ್ಕದ ಜಮೀನುಗಳ ಬೆಳೆಗಳಿಗೆ ತೊಂದರೆಯಾಗಿದ್ದು ಶಬ್ದಮಾಲಿನ್ಯದಿಂದಲೂ ತೊಂದರೆಯಾಗಿದೆ. ಬಿತ್ತನೆ ಮಾಡಿದ ಬೆಳೆಗಳ ಇಳುವರಿಗೂ ಪರಿಣಾಮ ಬೀರಿದ್ದು, ಗಾಳಿಯಂತ್ರಗಳ ಫ್ಯಾನ್‌ಗಳು ಹಲವು ಕಡೆ ಮುರಿದು ಬಿದ್ದು ಅನಾಹುತಗಳಾಗಿವೆ. ರೈತರಿಂದ 30 ವರ್ಷಗಳಿಗೆ ಒಪ್ಪಂದ ಮಾಡಿಕೊಂಡು ಯಂತ್ರಗಳನ್ನು ಅಳವಡಿಸಿದ್ದಾರೆ.
ಮುಂಚಿತವಾಗಿ ಅಕ್ಕ ಪಕ್ಕದ ರೈತರಿಗೆ ಗಮನಕ್ಕೆ ತಂದು ಯಂತ್ರಗಳನ್ನು ಅಳವಡಿಸುವಂತೆ ಹೇಳಿದ್ದರೂ ಕಂಪನಿಯವರು ನಿರ್ಲಕ್ಷ ತೋರುತ್ತಿದ್ದಾರೆ. ಕೂಡಲೇ ತೊಂದರೆಗೊಳಗಾದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net