

ದೇವದುರ್ಗ: ಜಾಲಹಳ್ಳಿ ಗ್ರಾಪಂನ ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಿದ್ದ ಸೌಂಡ್ ಸಿಸ್ಟಮ್ ಹಾಗೂ ಲೈಟಿಂಗ್ ಬಾಕಿ ಹಣ ನೀಡುವಂತೆ ಒತ್ತಾಯಿಸಿ ಸೌಂಡ್ ಸಿಸ್ಟಮ್ ಮಾಲೀಕ ಚನ್ನಪ್ಪ ಅಂದೇಲಿ ಗ್ರಾಪಂ ಮುಂದೆ ಕುಟುಂಬ ಸಮೇತ ಮಂಗಳವಾರ ಧರಣಿ ನಡೆಸಿದರು.
ಗ್ರಾಪಂ ಕಾರ್ಯಕ್ರಮಗಳಿಗೆ 2023ರಿಂದ ಇದುವರೆಗೆ ಸೌಂಡ್ ಸಿಸ್ಟಮ್ ಹಾಗೂ ಲೈಟಿಂಗ್ ಬಾಡಿಗೆಗೆ ನೀಡಿದ್ದು, ಸುಮಾರು ಎರಡು ಲಕ್ಷ ರೂ. ಬಾಕಿ ಉಳಿದಿದೆ. ಬಾಡಿಗೆ ಮೊತ್ತ ನೀಡುವಂತೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಇದರಿಂದ ನಾನು ವ್ಯವಹಾರ ಮಾಡುವುದು ಕಷ್ಟವಾಗಿದ್ದು, ಕುಟುಂಬ ನಿರ್ವಹಣೆಗೂ ಸಮಸ್ಯೆಯಾಗಿದೆ ಎಂದು ದೂರಿದರು.