ಖರಾಬದಿನ್ನಿ ಶ್ರೀ ದೊಡ್ಡ ಬಸಯ್ಯಶಾಸ್ತ್ರಿ ಪ್ರವಚನ ನೀಡಿದರೆ, ಶರಣಯ್ಯಸ್ವಾಮಿ ಸೋಮನಾಳ ಸಂಗೀತ ಸೇವೆ, ಆರ್.ಪಿ. ಮಲ್ಲಿನಾಥ ಸ್ವಾಮಿ ತಬಲಾ ಸಾಥ್ ನೀಡಿದರು. ಅಮರೇಶ ಗವಾಯಿ ಚಿಕ್ಕಕೋಟ್ನೆಕಲ್ ಗಾಯನ ನಡೆಸಿಕೊಟ್ಟರು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉಚ್ಚಾಯ ಮಹೋತ್ಸವ ನಡೆಯಿತು. ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ, ಡಾ.ಶರಣಪ್ಪ ಬಲ್ಲಟಗಿ, ಡಾ.ಚಂದ್ರಶೇಖರ ಸುವರ್ಣಗಿರಿ ಮಠ, ಮುಪ್ಪಿನ ದೇವಿ ದೇವಸ್ಥಾನದ ಪೀಠಾಧ್ಯಕ್ಷ ಪ್ರಭುಸ್ವಾಮೀಜಿ, ವೀರಭದ್ರಗೌಡ ಭೋಗಾವತಿ, ಶರಣಪ್ಪಗೌಡ ನಕ್ಕುಂದಿ, ಜೆ.ಎಂ. ಶರಣಯ್ಯಸ್ವಾಮಿ, ಗ್ರಾಪಂ ಸದಸ್ಯರಾದ ಮೌನೇಶಗೌಡ, ರಾಮನಗೌಡ ಪೊಪಾ, ನೀಲಪ್ಪಗೌಡ, ಬಸವರಾಜಪ್ಪ ಹೊಸಗೌಡ, ರೈತ ಸಂಘದ ಬಸವರಾಜ ಮಾಲಿಪಾಟೀಲ್, ಲಿಂಗರೆಡ್ಡಿ ಮಾಲಿಪಾಟೀಲ್, ಅಮರೇಗೌಡ ಮಾಲಿಪಾಟೀಲ್, ಶ್ರೀಮಠದ ಸೂಗುರಯ್ಯಸ್ವಾಮಿ ಇತರರಿದ್ದರು.