ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂಬ ಉದ್ದೇಶದಿಂದ ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಓದುವ ವಾತಾವರಣ, ದಿನನಿತ್ಯದ ಅಭ್ಯಾಸ ಹಾಗೂ ಪರೀಕ್ಷಾ ತಯಾರಿ ಕುರಿತು ಪರಿಶೀಲಿಸಿದ ತಹಸೀಲ್ದಾರ್ ಅಶೋಕ್ ಪವಾರ್, ಪರೀಕ್ಷೆ ಎಂದರೆ ಭಯ ಬೇಡ. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಸಮಯ ಪಾಲನೆ ಹಾಗೂ ನಿಯಮಿತ ಅಭ್ಯಾಸದಿಂದ ಉತ್ತಮ ಫಲಿತಾಂಶ ಪಡೆಯಬಹುದು.