ನೋಟಿಸ್ ನೀಡದೆ ವ್ಯಾಪಾರಿಗಳ ತೆರವು

ಲಿಂಗಸುಗೂರಿನಲ್ಲಿ ಎಸಿ ಕಚೇರಿಯ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಕಲ್ಯಾಣ ಕರ್ನಾಟಕ ಬೀದಿಬದಿ ಮಾರಾಟಗಾರರ ಸಂಘ ಮನವಿ ಸಲ್ಲಿಸಿತು. ಪ್ರಧಾನ ಸಂಚಾಲಕ ಆರ್.ಮಾನಸಯ್ಯ,ಅಮರಯ್ಯ ಘಂಟಿ, ನಿಂಗಪ್ಪ ಪರಂಗಿ, ಚಿದಾನಂದ ಕಸಬಾ ಲಿಂಗಸುಗೂರು, ಹಶ್ಮತ್, ರಮೇಶ ನಾಯಕ, ವಿಜಯಲಕ್ಷ್ಮೀ ಹಿರೇಮಠ, ಮೆಹಬೂಬ್ ಪಾಷಾ ಇತರರಿದ್ದರು.
ಲಿಂಗಸುಗೂರಿನಲ್ಲಿ ಎಸಿ ಕಚೇರಿಯ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಕಲ್ಯಾಣ ಕರ್ನಾಟಕ ಬೀದಿಬದಿ ಮಾರಾಟಗಾರರ ಸಂಘ ಮನವಿ ಸಲ್ಲಿಸಿತು. ಪ್ರಧಾನ ಸಂಚಾಲಕ ಆರ್.ಮಾನಸಯ್ಯ,ಅಮರಯ್ಯ ಘಂಟಿ, ನಿಂಗಪ್ಪ ಪರಂಗಿ, ಚಿದಾನಂದ ಕಸಬಾ ಲಿಂಗಸುಗೂರು, ಹಶ್ಮತ್, ರಮೇಶ ನಾಯಕ, ವಿಜಯಲಕ್ಷ್ಮೀ ಹಿರೇಮಠ, ಮೆಹಬೂಬ್ ಪಾಷಾ ಇತರರಿದ್ದರು.
Published on
ಲಿಂಗಸುಗೂರು: ಪಟ್ಟಣದಲ್ಲಿ ಬೀದಿಬದಿ ಮಾರಾಟಗಾರರ ತೆರವು ಖಂಡಿಸಿ ಕಲ್ಯಾಣ ಕರ್ನಾಟಕ ಬೀದಿಬದಿ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಸೋಮವಾರ ಬಸ್ ನಿಲ್ದಾಣ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ನಂತರ ಎಸಿ ಕಚೇರಿಯ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಮನವಿ ಸಲ್ಲಿಸಲಾಯಿತು.
ಸಂಘದ ಪ್ರಧಾನ ಸಂಚಾಲಕ ಆರ್.ಮಾನಸಯ್ಯ ಮಾತನಾಡಿ, ಪುರಸಭೆ ಆಡಳಿತವು 500ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳನ್ನು ಯಾವುದೇ ನೋಟಿಸ್, ಕಾಲಾವಕಾಶ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಒತ್ತಾಯದಿಂದ ತೆರವುಗೊಳಿಸಿರುವುದು ಖಂಡನೀಯ. ಅನೇಕರು ಪರವಾನಗಿ ಹೊಂದಿದ ಹಾಗೂ ಹಲವು ವರ್ಷಗಳಿಂದ ಜೀವನೋಪಾಯ ನಡೆಸುತ್ತಿದ್ದ ಬೀದಿಬದಿ ವ್ಯಾಪಾರಿಗಳನ್ನು ಸಹ ಮಾನವೀಯತೆ ಮತ್ತು ಕಾನೂನು ಪ್ರಕ್ರಿಯೆ ಪಾಲಿಸದೆ ಸ್ಥಳಾಂತರಿಸಲಾಗಿದೆ. ಇದರ ಪರಿಣಾಮ ನೂರಾರು ಕುಂಟುಂಬಗಳು ತಮ್ಮ ಜೀವನೋಪಾಯ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಆದ್ದರಿಂದ ಬೀದಿಬದಿ ಮಾರಾಟಗಾರರಿಗೆ ತಕ್ಷಣ ಮತ್ತೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ಪರವಾನಗಿ ಗುರುತಿನ ಚೀಟಿ ಹೊಂದಿದ ವ್ಯಾಪಾರಿಗಳನ್ನು ಅವರ ಮೂಲ ಸ್ಥಳದಲ್ಲಿ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಟೌನ್ ವೆಂಡಿಂಗ್ ಸಮಿತಿ ಸಭೆ ಏರ್ಪಡಿಸಿ ವ್ಯಾಪಾರಿಗಳ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು. ಪರ್ಯಾಯ ವ್ಯಾಪಾರ ವಲಯ, ಮೂಲ ಸೌಕರ್ಯ ಹಾಗೂ ಭದ್ರತೆ ಒದಗಿಸಬೇಕು. ಒತ್ತಾಯದಿಂದ ತೆರವು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ನ್ಯಾಯಾಲಯ ಮತ್ತು ಕಾನೂನು ನಿಯಮ ಪಾಲಿಸದೆ ಯಾವುದೇ ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಒತ್ತಾಯಿಸಿದರು. 
ಸಂಚಾಲಕರಾದ ಅಮರಯ್ಯ ಘಂಟಿ, ನಿಂಗಪ್ಪ ಪರಂಗಿ, ಚಿದಾನಂದ ಕಸಬಾ ಲಿಂಗಸುಗೂರು, ಹಶ್ಮತ್, ರಮೇಶ ನಾಯಕ, ಮಾನವ ಹಕ್ಕು ಸಂರಕ್ಷಣೆಯ ವಿಜಯಲಕ್ಷ್ಮೀ ಹಿರೇಮಠ, ಮೆಹಬೂಬ್ ಪಾಷಾ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net