ರಾಜ್ಯ ಯುವ ಆಯೋಗ ಸ್ಥಾಪನೆ ಮಾಡಿ

ಲಿಂಗಸುಗೂರಿನಲ್ಲಿ ಎಸಿ ಕಚೇರಿಯ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ನಗರ ಘಟಕಾಧ್ಯಕ್ಷ ಅಮ್ಜದ್ ಅಲಿ, ಖಲೀಲ್ ಅಹ್ಮದ್, ಶೇಕ್ ಖಾಜಾ, ರಾಜು ಇತರರಿದ್ದರು.
ಲಿಂಗಸುಗೂರಿನಲ್ಲಿ ಎಸಿ ಕಚೇರಿಯ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ನಗರ ಘಟಕಾಧ್ಯಕ್ಷ ಅಮ್ಜದ್ ಅಲಿ, ಖಲೀಲ್ ಅಹ್ಮದ್, ಶೇಕ್ ಖಾಜಾ, ರಾಜು ಇತರರಿದ್ದರು.
Published on
ಲಿಂಗಸುಗೂರು: ಯುವ ಜನರ ಹಿತಾಸಕ್ತಿಗಳ ರಕ್ಷಣೆ, ಸಮಗ್ರ ಅಭಿವೃದ್ಧಿಗೆ ರಾಜ್ಯ ಯುವ ಆಯೋಗ ಸ್ಥಾಪಿಸಲು ಒತ್ತಾಯಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕಾರ್ಯಕರ್ತರು ಗುರುವಾರ ಪಟ್ಟಣದ ಸಹಾಯಕ ಆಯುಕ್ತ ಕಚೇರಿಯ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚು ಯುವಜನರಿದ್ದಾರೆ. ಶಿಕ್ಷಣ, ಉದ್ಯೋಗ, ಆರೋಗ್ಯ, ಸಾಮಾಜಿಕ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ, ಮಾನಸಿಕ ಒತ್ತಡ, ಮಾದಕ ವ್ಯಸನ, ಸೈಬರ್ ವಂಚನೆ ಮುಂತಾದ ಗಂಭೀರ ಸಮಸ್ಯೆಗಳು ಯುವ ಜನರಲ್ಲಿ ಹೆಚ್ಚುತ್ತಿವೆ. ಯುವಜನರ ಪರಿಣಾಮಕಾರಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಯುವ ಆಯೋಗ ರಚಿಸಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net