ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಪಂನಲ್ಲಿ ರೋಜ್‌ಗಾರ್ ದಿನ ಆಚರಿಸಲಾಯಿತು. ನರೇಗಾ ಇಐಸಿ ಸಂಯೋಜಕ ಅಮರೇಶ, ಬಿಎಫ್‌ಟಿ ಮಲ್ಲಿಕಾರ್ಜುನ, ತಾಯಪ್ಪ, ಕೂಲಿಕಾರರಾದ ಬಸವರಾಜ, ನಾಗಪ್ಪ, ಈರಮ್ಮ, ತಾಯಮ್ಮ, ನಾಗಮ್ಮ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಮಾನ ಕೂಲಿ
ನರೇಗಾದಡಿ ಎಲ್ಲರಿಗೂ ಸಮಾನ ಕೂಲಿ
ದೇವದುರ್ಗ: ಉದ್ಯೋಗ ಖಾತ್ರಿ ಯೋಜನೆಯಡಿ ಗಂಡು-ಹೆಣ್ಣು ಎಂಬ ತಾರತಮ್ಯ ನೀತಿಗೆ ಅವಕಾಶವಿಲ್ಲ. ಪ್ರತಿಯೊಬ್ಬ ಕೂಲಿಕಾರರಿಗೂ 370ರೂ. ಸಮಾನ ಕೂಲಿ ನೀಡಲಾಗುತ್ತಿದೆ ಎಂದು ನರೇಗಾ ಇಐಸಿ ಸಂಯೋಜಕ ಅಮರೇಶ ಹೇಳಿದರು.
ತಾಲೂಕಿನ ಚಿಂಚೋಡಿ ಗ್ರಾಪಂನಲ್ಲಿ ಬುಧವಾರ ಆಯೋಜಿಸಿದ್ದ ರೋಜ್‌ಗಾರ್ ದಿನ ಆಚರಣೆ ಹಾಗೂ ನಿರಂತರ ಕೆಲಸಕ್ಕಾಗಿ ಅರ್ಜಿ ಸ್ವೀಕಾರ ಅಭಿಯಾನದಲ್ಲಿ ಮಾತನಾಡಿದರು.
ಕೆಲಸಕ್ಕೆ ಹಾಜರಾಗುವ ಕೂಲಿಕಾರರು ಕಡ್ಡಾಯವಾಗಿ 2 ಬಾರಿ ಹಾಜರಾತಿ ಹಾಕಬೇಕು. ಯೋಜನೆಯಡಿ ವೈಯಕ್ತಿಕ ಕೆಲಸ ಮಾಡಿಕೊಳ್ಳಲು ಅವಕಾಶವಿದೆ. ಸ್ತ್ರೀ ಚೇತನ ಅಭಿಯಾನದಡಿ ವಿವಿಧ ಕಾಮಗಾರಿ ಕೈಗೊಳ್ಳಬಹುದು. ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಕ್ಕೂ ಒಂದು ಅರ್ಥಿಕ ವರ್ಷದಲ್ಲಿ 100ದಿನ ಕೆಲಸ ನೀಡಲಾಗುತ್ತದೆ. ಒಂದು ಕುಟುಂಬ ವರ್ಷದಲ್ಲಿ 37ಸಾವಿರ ರೂ. ಕೂಲಿ ಪಡೆಯಬಹುದು.
ಪ್ರಧಾನಮಂತ್ರಿ ಬೀಮಾ ಸುರಕ್ಷಾ ಯೋಜನೆ ಮತ್ತು ಜೀವನ್ ಜ್ಯೋತಿ ಯೋಜನೆ ಕೂಲಿಕಾರರು ಮಾಹಿತಿ ತಿಳಿದುಕೊಳ್ಳಬೇಕು. ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆಯಡಿ 65ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ಶೇ.50 ಕೆಲಸ ಮಾಡಿದರೂ ಪೂರ್ಣ ಪ್ರಮಾಣದ ಕೂಲಿ ನೀಡಲಾಗುತ್ತದೆ ಎಂದರು. ಸ್ಥಳದಲ್ಲಿ ಅರ್ಜಿ ನಮೂನೆ-6ರಲ್ಲಿ ಕೆಲಸಕ್ಕಾಗಿ ಅರ್ಜಿ ಸ್ವೀಕರಿಸಲಾಯಿತು.