ಖಾತ್ರಿ ಯೋಜನೆಯಡಿ ಗಂಡು-ಹೆಣ್ಣಿಗೆ ಸಮಾನ ಕೂಲಿ

 ಕನ್ನಾರಿ ಗ್ರಾಮದ ನಾಲಾ  ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸೋಮವಾರ ಎನ್‌ಎಂಎಂಎಸ್‌ನಲ್ಲಿ ಹಾಜರಾತಿ ದಾಖಲಿಸುವ ಕುರಿತು ಮಾಹಿತಿ ನೀಡಲಾಯಿತು.
ಕನ್ನಾರಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸೋಮವಾರ ಎನ್‌ಎಂಎಂಎಸ್‌ನಲ್ಲಿ ಹಾಜರಾತಿ ದಾಖಲಿಸುವ ಕುರಿತು ಮಾಹಿತಿ ನೀಡಲಾಯಿತು.
Published on
ಸಿಂಧನೂರು: ತಾಲೂಕಿನ ಅಲಬನೂರ ಗ್ರಾಪಂ ವ್ಯಾಪ್ತಿ ಕನ್ನಾರಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸೋಮವಾರ ರೋಜಗಾರ್ ದಿವಸ ಆಚರಿಸಲಾಯಿತು. 
ತಾಪಂ ಐಇಸಿ ಸಂಯೋಜಕ ಥಾಮಸ್ ಮಾತನಾಡಿ, ಖಾತ್ರಿ ಯೋಜನೆಯಡಿ ಗಂಡು ಮತ್ತು ಹೆಣ್ಣಿಗೆ 370 ರೂ. ಸಮಾನ ಕೂಲಿ ಇದ್ದು, ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಅರ್ಥಿಕ ವರ್ಷದಲ್ಲಿ 100 ದಿನ ಕೆಲಸ ಕೊಡಲಾಗುತ್ತದೆ. ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ 37 ಸಾವಿರ ರೂ. ಕೂಲಿ ಪಡೆಯಬಹುದು.
 ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ಶೇ. 50 ಕೆಲಸ ಮಾಡಿದರೂ ಪೂರ್ತಿ ಪ್ರಮಾಣದ ಕೂಲಿ ನೀಡಲಾಗುತ್ತದೆ. ಮೂರು ವರ್ಷದೊಳಗಿನ ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ಬರಬೇಕು. 
18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಬರಬಾರದು ಎಂದು ತಿಳಿಸಿದರು. ಎನ್‌ಎಂಎಂಎಸ್ ಹಾಜರಾತಿಯನ್ನು ಎರಡು ಬಾರಿ  ಕಡ್ಡಾಯವಾಗಿ ತೆಗೆದುಕೊಳ್ಳಲು ಸಿಬ್ಬಂದಿಗೆ ತಿಳಿಸಲಾಯಿತು. ರಾಜೀವ್ ಗಾಂಧಿ ಫೆಲೋ ಧನ್ಯ ಪ್ರಭು, ಗ್ರಾಪಂ ಡಿಇಒ ಶರಣಪ್ಪ ಹಾಗೂ ಕೂಲಿ ಕಾರ್ಮಿಕರು ಇದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net