ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಲಿ

ಹೊಕ್ರಾಣಿಯಲ್ಲಿ ಮೃತ ಯುವತಿ ಕುಟುಂಬಸ್ಥರಿಗೆ ದೇವದುರ್ಗ ಶಾಸಕಿ ಜಿ.ಕರೆಮ್ಮ ಜಿ.ನಾಯಕ ಸಾಂತ್ವನ ಹೇಳಿದರು.
ಹೊಕ್ರಾಣಿಯಲ್ಲಿ ಮೃತ ಯುವತಿ ಕುಟುಂಬಸ್ಥರಿಗೆ ದೇವದುರ್ಗ ಶಾಸಕಿ ಜಿ.ಕರೆಮ್ಮ ಜಿ.ನಾಯಕ ಸಾಂತ್ವನ ಹೇಳಿದರು.
Published on
ಸಿರವಾರ: ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಘಟನೆಗಳು ಹೆಚ್ಚಾಗಿದೆ ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಹೊಕ್ರಾಣಿ ಗ್ರಾಮದಲ್ಲಿ ಇತ್ತೀಚೆಗೆ ಮೃತಪಟ್ಟ ಯುವತಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಂಗಳವಾರ ಮಾತನಾಡಿದರು. ಮಹಿಳೆಯರ ರಕ್ಷಣೆಗಾಗಿ ರಾಜ್ಯದಲ್ಲಿ ಕಠಿಣ ಕಾನೂನು ಜಾರಿ ಮಾಡುವಂತೆ ಮುಂದಿನ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸುವೆ ಎಂದು ಭರವಸೆ ನೀಡಿದರು.
ಯುವತಿ ಕುಟುಂಬಕ್ಕೆ ವೈಯಕ್ತಿಕವಾಗಿ 25 ಸಾವಿರ ರೂ. ನೀಡಿದರು. ತಾಪಂ ಮಾಜಿ ಸದಸ್ಯ ಗೋವಿಂದರಾಜ ನಾಯಕ, ಭೀಮಣ್ಣ ಗೋಸಲ್, ಚನ್ನಪ್ಪ ಮಸೀದಾಪೂರ, ಮಹಿಬೂಬ್ ಹೆಗ್ಗಡದಿನ್ನಿ, ದಾನಪ್ಪ ಸಿರವಾರ, ರಂಜಿತ್ ಸಿರವಾರ, ನಾಗರಾಜ ಹೊಕ್ರಾಣಿ, ರಮೇಶ ರಾಮನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net