ಸರ್ಕಾರಿ ಭೂಮಿ ಒತ್ತುವರಿ ಮಾಡಿದರೆಗೆ ಶಿಕ್ಷೆಯಾಗಲಿ

ತಾಲೂಕಿನ ಗಬ್ಬೂರು ಗ್ರಾಮದ ಸರ್ವೇ ನಂ 773/*/5 ರ ಸರ್ಕಾರಿ ಗೈರಾಣಿ ಭೂಮಿಯನ್ನು ಒತ್ತುವರಿ ಮಾಡಿದ ನರೇಶ ಕುಮಾರ ಮೇಲೆ ಕ್ರಿಮಿನಲ್ ಮೊಕ್ಕದಮೆ ದಾಖಲಿಸಿ ಭೂಮಿಯನ್ನು ಹದ್ದು ಬಸ್ತು ಮಾಡಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಿಂದ ದೇವದುರ್ಗ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿಗೆ ಗುರುವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಬಸವರಾಜ ಜಗ್ಲಿ,ಮಲ್ಲಿಕಾರ್ಜುನ ಸಿಂಗ್ರಿ,ಅನಂತ, ತುಳಿಜಮ್ಮ,ಅಕ್ಕಮ್ಮ,ಗಣೇಶ,ನಿಂಗಪ್ಪ ಇದ್ದರು.

Published on

ಗ್ರಾಮದ ಸರ್ವೆ ನಂ :- 773/*/5 ರ ಪಕ್ಕದ ದಕ್ಷಿಣ ಭಾಗದಲ್ಲಿ ಸರ್ಕಾರದ ಗಾಯಿರಾಣಿ ಭೂಮಿ ಇದ್ದು,ಈ ಭೂಮಿಯಲ್ಲಿ ಸುಮಾರು 15 ವರ್ಷಗಳಿಂದ ಶ್ರೀ ರೇಣುಕ ಯಲ್ಲಮ್ಮ ದೇವಿ ದೇವಸ್ಥಾನ ದೇವಸ್ಥಾನ ನಿರ್ಮಾಣ ಮಾಡಲಾಗಿರುತ್ತದೆ. ಜತೆಗೆ ಸರ್ಕಾರದ ವತಿಯಿಂದ 6 ಲಕ್ಷ ರೂ.ಅನುದಾನ ಹಣವನ್ನು ಮಂಜೂರು ಮಾಡಿಸಿ ಜಿರ್ಣೋದ್ಧಾರ ಮಾಡಿರುತ್ತಾರೆ.
ಆದರೆ ನರೇಶ ಕುಮಾರ ಬಂದು ದೇವಸ್ಥಾನವು ನಮ್ಮ ಜಾಗದಲ್ಲಿ ಇದೆ ಎಂದು ತಕರಾರು ಮಾಡುವುದಲ್ಲದೆ ದೇವಸ್ಥಾನದ ಪೂಜಾರಿಗೆ ಕಿರುಕುಳ ನೀಡುತ್ತಿದ್ದು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತದಿಗಳಿಗೆ ಅಡಚಣೆ ಮಾಡುವುದು ಪೂಜೆ ಕಾರ್ಯಗಳು ಮಾಡದಂತೆ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರಿ ಗೈರಾಣಿ ಭೂಮಿಯು ತಮ್ಮ ವೈಯಕ್ತಿಕ ಕೆಲಸಗಳಿಗೆ ಒತ್ತುವರಿ ಮಾಡಿ ಬಳಸುತ್ತಿರುವ ಭೂಗಳ್ಳ ನರೇಶ ಕುಮಾರ ಈತನ ಮೇಲೆ ತಾವುಗಳು ಕ್ರಿಮಿನಲ್ ಮೊಕ್ಕದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಜಗ್ಲಿ,ಮಲ್ಲಿಕಾರ್ಜುನ ಸಿಂಗ್ರಿ,ಅನಂತ, ತುಳಿಜಮ್ಮ,ಅಕ್ಕಮ್ಮ,ಗಣೇಶ,ನಿಂಗಪ್ಪ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net