ಜನಪದ ಸಂಸ್ಕೃತಿ ಉಳಿಸಲು ಪ್ರೋತ್ಸಾಹ ನೀಡಲಿ

ಮಸ್ಕಿ ಗಚ್ಚಿನ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಗಾಯಕ ವೀರೇಶ ಸಾಲಿಮಠ ವಚನ ಗಾಯನ  ಮಾಡಿದರು. ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು, ಸಾಹಿತಿ ಸಿ.ದಾನಪ್ಪ ನಿಲೋಗಲ್, ಪುರಸಭೆ ಅಧ್ಯಕ್ಷ ಸುರೇಶ ಹರಸುರು, ಕಸಾಪ ತಾಲೂಕು ಅಧ್ಯಕ್ಷೆ ವಿದ್ಯಾವತಿ ವನಕಿ, ಜನಪದ ಅಕಾಡೆಮಿ ಸದಸ್ಯ ರಂಗಪ್ಪ ಮಾಸ್ತರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರೋತ್ಸಾಹ ನೀಡಲಿ

ಜನಪದ ಸಂಸ್ಕೃತಿ ಉಳಿಸಲು ಪ್ರೋತ್ಸಾಹ ನೀಡಲಿ

ಮಸ್ಕಿ: ಆಧುನಿಕ ಭರಾಟೆಯಲ್ಲಿ ಜನಪದ ಕಲೆ ನಶಿಸುತ್ತಿದ್ದು, ಹಳ್ಳಿಗಳಲ್ಲಿ ಮಾತ್ರ ಜೀವಂತವಾಗಿದೆ. ಜನಪದ ಸಂಸ್ಕೃತಿ ಉಳಿಸಲು ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದು ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರಿಂದ ಮಂಗಳವಾರ ಆಯೋಜಿಸಿದ್ದ ಜನಪದ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲೆಯನ್ನು ಜೀವಂತವಾಗಿಡುವ ಕಲಾವಿದರನ್ನು ಗೌರವಿಸಬೇಕು ಎಂದರು. ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ, ಮನುಷ್ಯನ ಬದುಕಿನ ಭಾಗವಾಗಿ ಜನಪದ ಕಲೆ ಬೆಳೆದು ಬಂದಿದೆ.
ಜನಪದ ಕಲೆ ಮತ್ತು ಕಲಾವಿದರು ಅನಕ್ಷರಸ್ಥರಾದರು ಅಕ್ಷರ ಬಲ್ಲವರೂ ಜನಪದ ಕಲೆಯಿಂದ ದೂರ ಸರಿಯುತ್ತಿರುವುದು ಕಳವಳ ಉಂಟುಮಾಡಿದೆ ಎಂದು ಹೇಳಿದರು. ಗಾಯಕ ವೀರೇಶ ಸಾಲಿಮಠ ಅವರಿಂದ ವಚನ ಗಾಯನ, ವಿವಿಧ ಪ್ರಕಾರದ ಜನಪದ ಗಾಯನ ಕಾರ್ಯಕ್ರಮ ನಡೆಯಿತು.
ಸಾಹಿತಿ ಸಿ.ದಾನಪ್ಪ ನಿಲೋಗಲ್, ಪುರಸಭೆ ಅಧ್ಯಕ್ಷ ಸುರೇಶ ಹರಸುರು, ಕಸಾಪ ತಾಲೂಕು ಅಧ್ಯಕ್ಷೆ ವಿದ್ಯಾವತಿ ವನಕಿ, ಜನಪದ ಅಕಾಡೆಮಿ ಸದಸ್ಯ ರಂಗಪ್ಪ ಮಾಸ್ತರ, ಪ್ರಮುಖರಾದ ನಾರಯಣಪ್ಪ ಮಾಡಸಿರವಾರ, ಅಮರೇಶ ಹಸಮಕಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net