ಮರ್ಯಾದೆಹತ್ಯೆ ತಡೆಗೆ ಕಾಯ್ದೆ ರೂಪಿಸಿ

ದೇವದುರ್ಗದ ತಹಸಿಲ್ ಕಚೇರಿಯ ಶಿರಸ್ತೇದಾರ್ ಭೀಮರಾಯ ಮೇಟಿಗೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು. ಮುಖಂಡರಾದ ಮೋಹನ್ ಬಲ್ಲಿದವ್, ಹನುಮಂತ ದೊರೆ, ವಿಶ್ವನಾಥ್ ಬಲ್ಲಿದವ್, ಬಸವರಾಜ ಜಗ್ಲಿ, ಬಸವ, ಚಂದ್ರು ನಾಯಕ, ಮಲ್ಲಿಕಾರ್ಜುನ ಸಿಂಗ್ರಿ, ಮಲ್ಲಪ್ಪ ಕ್ರಾಂತಿಕುಮಾರ್

Published on
ದೇವದುರ್ಗ: ರಾಜ್ಯ ಸರ್ಕಾರ ಮರ್ಯಾದೆ ಹತ್ಯೆ ತಡೆಯಲು ಹೊಸ ಕಾಯ್ದೆ ಜಾರಿಗೊಳಿಸಲು ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧ ಮುಂಭಾಗ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಪ್ರತಿಭಟನೆ ನಡೆಸಿತು.
ಜಾತಿ ಆಧಾರಿತ ತಾರತಮ್ಯ, ಹಿಂಸೆಗಳ ತಡೆಗೆ ಅಂತರಜಾತಿ ವಿವಾಹ ಪರಿಹಾರ ಎಂಬುದನ್ನು ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು. ಅದನ್ನು ತಮ್ಮ ಅವಧಿಯಲ್ಲಿ ಅನುಷ್ಠಾನಕ್ಕೆ ತಂದಿದ್ದರು. ವಿಜ್ಞಾನ ಯುಗದಲ್ಲೂ ಜಾತಿ ವ್ಯವಸ್ಥೆ ಮುಂದುವರಿದಿರುವುದು ಸಾಮಾಜಿಕ ಅಶಾಂತಿಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರಾಜ್ಯ ಸರ್ಕಾರ ಮರ್ಯಾದೆ ಹತ್ಯೆ ತಡೆಗೆ ವಿಶೇಷ ಕಾಯ್ದೆ ರೂಪಿಸಬೇಕು. ಕೃತ್ಯದಲ್ಲಿ ಭಾಗಿಯಾಗುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜಾತಿ ವ್ಯವಸ್ಥೆ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಹಲ್ಲೆ ಹಾಗೂ ಕೊಲೆಗಳನ್ನು ಘೋರ ಅಪರಾಧ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net