ವಿವೇಕಾನಂದರ ಆದರ್ಶ ಮೈಗೂಡಿಸಿಕೊಳ್ಳಿ

ಮಾನ್ವಿಯ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ. ಜೆ.ಎಲ್. ಈರಣ್ಣ, ಪ್ರಾಧ್ಯಾಪಕ ಡಾ. ರವಿ ಎಂ., ಸುರೇಶ ಹರನಹಳ್ಳಿ, ರೇಣುಕಾ ಇದ್ದರು.
ಮಾನ್ವಿಯ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ. ಜೆ.ಎಲ್. ಈರಣ್ಣ, ಪ್ರಾಧ್ಯಾಪಕ ಡಾ. ರವಿ ಎಂ., ಸುರೇಶ ಹರನಹಳ್ಳಿ, ರೇಣುಕಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅತಿಥಿ
  • ಉಪನ್ಯಾಸಕ
  • ಯುವಕರು
ಮಾನ್ವಿ: ಸ್ವಾಮಿ ವಿವೇಕಾನಂದ ಅವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡಾಗ ಮಾತ್ರ ದೇಶಪ್ರೇಮ ಬೆಳೆಯುತ್ತದೆ ಎಂದು ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಜೆ.ಎಲ್. ಈರಣ್ಣ ಹೇಳಿದರು.
ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವೇಕಾನಂದರು 1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಮ್ಮೇಳನದಲ್ಲಿ ಹಿಂದೂ ಧರ್ಮದ ಪ್ರತಿನಿಧಿಯಾಗಿ ನೀಡಿದ ಉಪನ್ಯಾಸ ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತಾಗಿತ್ತು ಎಂದರು. ಸಹ ಪ್ರಾಧ್ಯಾಪಕ ಡಾ. ರವಿ.ಎಂ, ಅತಿಥಿ ಉಪನ್ಯಾಸಕರಾದ ಡಾ. ಚನ್ನಬಸವ ಮಾಡಗಿರಿ, ಡಾ. ಬಸವರಾಜ ಸುಂಕೇಶ್ವರ್, ಡಾ. ಅಬಿಸಾಬ್, ಕಾಲೇಜು ಸಿಬಂದಿ ರಂಗನಾಥ್ ಅತ್ತನೂರು, ಭೀಮಸಿಂಗ್, ಸುರೇಶ ಹರನಹಳ್ಳಿ, ರೇಣುಕಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net