ಮಾನವೀಯ ಮೌಲ್ಯಗಳ ಮೈಗೂಡಿಸಿಕೊಳ್ಳಿ

ಮುದಗಲ್ ಸಮೀಪದ ಸುಕ್ಷೇತ್ರ ಸಜ್ಜಲಗುಡ್ಡದಲ್ಲಿ ಅಧಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ಬಸವರಾಜ ಹಂದ್ರಾಳ ಮಾತನಾಡಿದರು. ಶ್ರೀಮಠದ ಪೀಠಾಧಿಪತಿ ದೊಡ್ಡಬಸವಾರ್ಯ ತಾತ, ಶರಣಮ್ಮ ತಾಯಿ ಇದ್ದರು ಮತ್ತು ಛತ್ತರ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದರ್ಶನಕ್ಕೆ ಬಂದಿದ್ದ ಭಕ್ತರು.
ಮುದಗಲ್ ಸಮೀಪದ ಸುಕ್ಷೇತ್ರ ಸಜ್ಜಲಗುಡ್ಡದಲ್ಲಿ ಅಧಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ಬಸವರಾಜ ಹಂದ್ರಾಳ ಮಾತನಾಡಿದರು. ಶ್ರೀಮಠದ ಪೀಠಾಧಿಪತಿ ದೊಡ್ಡಬಸವಾರ್ಯ ತಾತ, ಶರಣಮ್ಮ ತಾಯಿ ಇದ್ದರು ಮತ್ತು ಛತ್ತರ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದರ್ಶನಕ್ಕೆ ಬಂದಿದ್ದ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಬಸವರಾಜ ಹಂದ್ರಾಳ ಸಲಹೆ
  • ಸಜ್ಜಲಗುಡ್ಡದಲ್ಲಿ ಸಂಕಲ್ಪ ರಥ ಕಾರ್ಯಕ್ರಮ
ಮುದಗಲ್: ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ನಾಣ್ನುಡಿಗಳ ತಾತ್ಪರ್ಯಗಳನ್ನು ಅರಿಯಬೇಕು. ಮಾತು ಎಂಬುದು ಜ್ಯೋತಿರ್ಲಿಂಗವಾಗಿದೆ ಎಂದು ಸಜ್ಜಲಗುಡ್ಡ ಪ್ರೌಢಶಾಲೆ ಮುಖ್ಯಶಿಕ್ಷಕ ಬಸವರಾಜ ಹಂದ್ರಾಳ ಅಭಿಪ್ರಾಯಪಟ್ಟರು.
ಸಮೀಪದ ಸುಕ್ಷೇತ್ರ ಸಜ್ಜಲಗುಡ್ಡದ ಶರಣಮ್ಮ ತಾಯಿ ಮಠದಲ್ಲಿ ಅಧಿಕ ಅಮಾವಾಸ್ಯೆ ನಿಮಿತ್ತ ಹಮ್ಮಿಕೊಂಡಿದ್ದ ಸಂಕಲ್ಪ ರಥ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಮಠವು ದಾಸೋಹ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದಿದ್ದು, ನಾವು-ನೀವೆಲ್ಲರೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ, ಆಚಾರ-ವಿಚಾರ, ಸಂಪ್ರದಾಯಗಳ ಬಗ್ಗೆ ಪಾಲಕರು ಮನನ ಮಾಡುವಲ್ಲಿ ಗುರುತರ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದ ಅವರು, ಲಿಂಗನಿಷ್ಠೆ, ಕಾಯಕ, ಸಂಸ್ಕಾರ, ಸನಾತನ ಧರ್ಮ ರಕ್ಷಣೆ, ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿದರು. ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತ ಸಾನ್ನಿಧ್ಯವಹಿಸಿದ್ದರು. ಶಿವಬಸ್ಸಯ್ಯ ತಾತ, ಕರಿವೀರಯ್ಯ ಗುರುಗಳು ಇತರರಿದ್ದರು.
ಛತ್ತರ ಗ್ರಾಮಕ್ಕೆ ಹರಿದು ಬಂದ ಭಕ್ತರು: ಅಮಾವಾಸ್ಯೆ ನಿಮಿತ್ತ ಛತ್ತರ ಆಂಜನೇಯನ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬೆಳಗ್ಗೆ ದೇವರಿಗೆ ಎಲೆಚಟ್ಟು ಸೇವೆ, ಬಿಲ್ವಾರ್ಚನೆ ಹಾಗೂ ವಿವಿಧ ಹೂಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಮುದಗಲ್ ಸೇರಿ ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು, ಮುಡುಪು ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದಲ್ಲಿ ಪ್ರಸಾದ ಸೇವೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net