ಸೆ.01 ರಂದು ಎಲೆಕ್ಷನ್ ಕಮೀಷನ್ ಚಲೋ ಹೋರಾಟ

ಸಮಿತಿ ಸಂಚಾಲಕ ಶರಣುಕುಮಾರ
ಸಮಿತಿ ಸಂಚಾಲಕ ಶರಣುಕುಮಾರ
Published on

ರಾಜ್ಯದಲ್ಲಿ 1.2 ಕೋಟಿ ಅರ್ಹ ಮತದಾರರ ಹಕ್ಕು ಕಸಿದುಕೊಂಡಿರುವುದನ್ನು ವಿರೋಧಿಸಿ ಸೆ.1 ರಂದು ನಾಗರೀಕ ಸಂಘಟನೆಗಳು ಸಾಕ್ಷ್ಯಗಳೊಂದಿಗೆ ಎಲೆಕ್ಷನ್ ಕಮೀಷನ್ ಚಲೋ ಹೋರಾಟ ನಡೆಸಲಾಗುತ್ತದೆಂದು ಕರ್ನಾಟಕ ನಾಗರೀಕ ಸಂಘಟನೆಗಳ ಒಕ್ಕೂಟದ ಸಮಿತಿ ಸಂಚಾಲಕ ಶರಣುಕುಮಾರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಚುನಾವಣಾ ಆಯೋಗ ಮಂಡಿಸಿರು ಕರಡು ಮತದಾರರ ಪಟ್ಟಿ ಒಪ್ಪಲು ಸಾಧ್ಯವಿಲ್ಲ. ದೋಷಪೂರಿತವಾದ ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ.
ಎಸ್‌ಐಆರ್ ಕುರಿತಂತೆ ನಾಗೀಕರ ಅನುಮಾನಗಳು, ಆತಂಕಗಳನ್ನು ದೂರ ಮಾಡಬೇಕಿದ್ದ ಚುನಾವಣಾ ಆಯೋಗ ಮರೆ ಮಾಚಿ ತಪ್ಪುಮಾ ಹಿತಿಯನ್ನು ನೀಡುತ್ತಲೇ ಬಂದಿದೆ. ಜನಜಾಗೃತಿ ಮಧ್ಯೆಯೂ ಅರ್ಹರನ್ನು ಮತದಾರರ ಪಟ್ಟಿ ಯಿಂದ ಹೊರಗಿಟ್ಟಿದೆ, ಬಿಎಲ್‌ಓಗಳಿಗೆ ಸಮರ್ಪಕ ತರಬೇತಿ ನೀಡದೇ ತರಾತುರಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿರುವದಾಗಿ ಹೇಳುತ್ತಿದೆ.
ಕೇಂದ್ರ ಬಿಜೆಪಿ ಸರ್ಕಾರ ಮತ್ತು ಆಯೋಗ ಎರಡು ಸೇರಿಕೊಂಡು ಅರ್ಹ ಮತದಾರರನ್ನು ವಂಚಿತಗೊಳಿಸಿದೆ ಎಂದರು. 20 ಲಕ್ಷ ಮತದಾರರನ್ನು ಅನುಮಾನಸ್ಪದ ಗುರುತಿಸಿರುವ ಆಯೋಗ ಇವರೆಲ್ಲ ಯಾರು ಎಂದು ಹೇಳಲು ಸಿದ್ದವಿಲ್ಲ. ವಲಸೆ ಹೋದವರು, ಅನ್ಯ ಕಾರಣಕ್ಕೆ ಲಭ್ಯವಾಗದೇ ಇರುವವರೆಲ್ಲರನು ಏಲ್ಲಿಯೂ ಇಲ್ಲದಂತಾಗಿದೆ. ಸರಿ ಸುಮಾರು 50 ಲಕ್ಷ ಜನರು ಸ್ಥಳಾಂತರ ಎಂದು ಗುರುತಿಸಲಾಗಿದೆ.
ಮತದಾರರ ಪಟ್ಟಿಗೆ ಸೇರ್ಪಡೆಯಾಗಿಲ್ಲ ಎಂದರೆ ಮತದಾನ ಹಕ್ಕು ಕಸಿದುಕೊಂಡಂತೆಯೇ ಸರಿ. ಕೂಡಲೇ ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸದೇ ಹೋದಲ್ಲಿ ನ್ಯಾಯಾಲಯದ ಮೊರೆ ಹೋಗುವದಾಗಿಯೂ ಹೇಳಿದರು.
ಈ ಸಂದರ್ಭದಲ್ಲಿ ಅಸೀಮುದ್ದೀನ್,ಆಂಜಿನಯ್ಯ ಕುರಬದೊಡ್ಡಿ, ಮಾರೆಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net