

ಪ್ರಮುಖ ಮುಖ್ಯಾಂಶಗಳು
"ಅರಕೇರಾ ತಾಲೂಕಿನ ಕೆಲ ಗ್ರಾಪಂ ವ್ಯಾಪ್ತಿಯ ಜನರು ನಮ್ಮನ್ನು ದೇವದುರ್ಗ ತಾಲೂಕಿನಲ್ಲೇ
ಮುಂದುವರಿಸಲು ಒತ್ತಾಯಿಸಿ ನನಗೆ ಮನವಿ ಸಲ್ಲಿಸಿದ್ದಾರೆೆ. ಈ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಕಾನೂನು ಪ್ರಕಾರ ಕ್ರಮವಹಿಸಲು ತಿಳಿಸಿದ್ದೇನೆ.
— ಡಾ.ಶರಣಪ್ರಕಾಶ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ, ರಾಯಚೂರು
"ಎಂಟು ಗ್ರಾಪಂಗಳು ದೇವದುರ್ಗ ತಾಲೂಕಿನಲ್ಲೇ ಉಳಿಯಲು ಸಾಮಾನ್ಯ ಸಭೆಯಲ್ಲಿ ಠ
ರಾವು ಪಾಸ್ ಮಾಡಿವೆ. ಈ ಗ್ರಾಪಂಗಳ ವ್ಯಾಪ್ತಿಯ ಸ್ಥಿತಿಗತಿ ಸೇರಿ ವಿವಿಧ ಅಂಶಗಳನ್ನು ಪಟ್ಟಿ ಮಾಡಿ ವರದಿ ಸಲ್ಲಿಸಲು ಅಪರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಪರಿಶೀಲಿಸಿ ವರದಿ ನೀಡಲಾಗುವುದು.
— ನಾಗಮ್ಮ ಕಟ್ಟಿಮನಿ ತಹಸೀಲ್ದಾರ್
"
ಅಖಂಡ ದೇವದುರ್ಗ ತಾಲೂಕನ್ನು ರಾಜಕೀಯ ಸ್ವಾರ್ಥಕ್ಕೆ ಒಡೆದು ಅವೈಜ್ಞಾನಿಕವಾಗಿ ಅರಕೇರಾ ರಚನೆ ಮಾಡಿದ್ದಾರೆ. ಇದರಿಂದ ಹಲವು ಗ್ರಾಪಂಗಳಿಗೆ ಸಮಸ್ಯೆಯಾಗುತ್ತಿದೆ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದು ಎಂಟು ಗ್ರಾಪಂಗಳನ್ನು ದೇವದುರ್ಗದಲ್ಲಿ ಉಳಿಸಲು ಒತ್ತಾಯಿಸಿದ್ದೇವೆ. ಅಖಂಡತೆಗಾಗಿ ಹೋರಾಟ ಮುಂದುವರಿಯಲಿದೆ.
— ಶಿವರಾಜ ನಾಯಕ ಕೊತ್ತದೊಡ್ಡಿ ಸಂಚಾಲಕ, ಅಖಂಡ ದೇವದುರ್ಗ ಹೋರಾಟ ಸಮಿತಿ