ಲಿಂಗಸುಗೂರು ಜಿಲ್ಲಾ ಕೇಂದ್ರ ಮಾಡಲು ಪ್ರಯತ್ನ

ಲಿಂಗಸುಗೂರಲ್ಲಿ ಕನಕ ಭವನ ನಿರ್ಮಾಣಕ್ಕೆ ಶಾಸಕ ಮಾನಪ್ಪ ವಜ್ಜಲ್ ಭೂಮಿಪೂಜೆ ನೆರವೇರಿಸಿದರು.
ಲಿಂಗಸುಗೂರಲ್ಲಿ ಕನಕ ಭವನ ನಿರ್ಮಾಣಕ್ಕೆ ಶಾಸಕ ಮಾನಪ್ಪ ವಜ್ಜಲ್ ಭೂಮಿಪೂಜೆ ನೆರವೇರಿಸಿದರು.
Published on
ಲಿಂಗಸುಗೂರು: ಹಾಲುಮತ ಸಮಾಜದ ಶಕ್ತಿ ರಾಜ್ಯದ ಜನತೆಗೆ ಗೊತ್ತಿದೆ. ನಾನು ಮೂರು ಸಲ ಶಾಸಕನಾಗಲು ಹಾಲುಮತ ಸಮಾಜದ ಆಶೀರ್ವಾದವೇ ಕಾರಣ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು. 
ಪಟ್ಟಣದ ಹಾಲುಮತ ಸಮಾಜ ಭವನದಲ್ಲಿ ಶುಕ್ರವಾರ ಕನಕ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಶಾಸಕನಾಗಿದ್ದೇನೆ. ಹಾಲುಮತ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಅತಿಹೆಚ್ಚು ಮತಗಳು ಬಂದಿವೆ. 
ಕನಕ ಭವನಕ್ಕೆ 25 ಲಕ್ಷ ರೂ. ಅನುದಾನ ಒದಗಿಸಿದ್ದೇನೆ. ಅತಿದೊಡ್ಡ ಸಮುದಾಯ ಭವನ ನಿರ್ಮಾಣಕ್ಕೆ ಹಾಲುಮತ ಸಮಾಜ ಮುಂದಾದರೆ ಅಗತ್ಯ ಅನುದಾನ ನೀಡಲಾಗುವುದು ಎಂದ ಅವರು, ಲಿಂಗಸುಗೂರು ಜಿಲ್ಲಾ ಕೇಂದ್ರ ಮಾಡಲು ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಿ ಮುಂದಿನ ದಿನಗಳಲ್ಲಿ ಸರ್ಕಾರವನ್ನು ಒತ್ತಾಯ ಪಡಿಸುತ್ತೇನೆ. ಜಿಲ್ಲಾ ಕೇಂದ್ರ ಆಗುವುದು ಸತ್ಯ ಎಂದರು. 
ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಕುಪ್ಪಣ್ಣ ಕೊಡ್ಲಿ, ಸಿಂಧನೂರು ಬಿಜೆಪಿ ಮುಖಂಡ ಕೆ.ಕರಿಯಪ್ಪ, ಅಯ್ಯಪ್ಪ ಮಾಳೂರು, ಗಿರಿಮಲ್ಲನಗೌಡ ಪಾಟೀಲ್, ಕೆ.ನಾಗಭೂಷಣ, ಹುಲ್ಲೇಶ ಸಾಹುಕಾರ, ಹನುಮಂತಪ್ಪ ಕಂದಗಲ್ಲ, ಬೀರಪ್ಪ ಪೂಜಾರಿ, ಸಿದ್ದಯ್ಯ ಗುರುವಿನ, ಶರಣಬಸವ ಗುಡದಿನ್ನಿ, ನೀಲಪ್ಪ ಹೊಸಮನಿ, ಗ್ಯಾನಪ್ಪ, ಪರಸಪ್ಪ ಹುನಕುಂಟಿ, ಜೀವಲಪ್ಪ ನಾಯಕ, ನಾರಾಯಣಪ್ಪ ನಾಯಕ, ಲಿಂಗಪ್ಪ ದೇವಿಕೇರಿ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net