ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ ಪರಿಣಾಮಕಾರಿ ಅನುಷ್ಠಾನಗೊಳಿಸಿ- ಡಿಸಿ

ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ  ಗುರುವಾರ ಜಿಲ್ಲಾ ಅರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ನಿತೀಶ್ ಕೆ., ಬಿಡುಗಡೆ ಮಾಡಿದರು. ಡಿಎಚ್‌ಓ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರ  ಚಿಕಿತ್ಸಕ ಡಾ.ವಿಜಯ ಶಂಕರ, ಡಿಪಿಡಿಓ ಡಾ.ಚಂದ್ರಶೇಖರಯ್ಯ ಸ್ವಾಮಿ, ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಂ.ಎನ್., ಡಿಎಸ್‌ಓ ಡಾ.ಗಣೇಶ್ ಕೆ, ಡಿಟಿಓ ಡಾ.ಮಹ್ಮದ್ ಶಾಕೀರ್ ಮೊಹಿಯುದ್ದೀನ ಇದ್ದರು.
ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಗುರುವಾರ ಜಿಲ್ಲಾ ಅರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ನಿತೀಶ್ ಕೆ., ಬಿಡುಗಡೆ ಮಾಡಿದರು. ಡಿಎಚ್‌ಓ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ, ಡಿಪಿಡಿಓ ಡಾ.ಚಂದ್ರಶೇಖರಯ್ಯ ಸ್ವಾಮಿ, ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಂ.ಎನ್., ಡಿಎಸ್‌ಓ ಡಾ.ಗಣೇಶ್ ಕೆ, ಡಿಟಿಓ ಡಾ.ಮಹ್ಮದ್ ಶಾಕೀರ್ ಮೊಹಿಯುದ್ದೀನ ಇದ್ದರು.
Published on
ರಾಯಚೂರು ಯಾವುದೇ ಕಾಯಿಲೆಯಾಗಿರಲಿ ಅದನ್ನು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಮುಖ್ಯವಾಗಿದೆ. ಮೊಬೈಲ್‌ನಲ್ಲಿ ಎಚ್‌ಐವಿ ಸ್ಥಿತಿಗತಿಯನ್ನು ಪರಿಶೀಲನೆಗೆ ಒಳಪಡಿಸಿಕೊಳ್ಳ ಮೂಲಕ ಜಿಲ್ಲೆಯಲ್ಲಿ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಗುರುವಾರ ಜಿಲ್ಲಾ ಅರೋಗ್ಯ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರವು ಸಮುದಾಯದ ಆರೋಗ್ಯ ಸಂರಕ್ಷಣೆಗೆ ಮತ್ತು ಸಮಾಜದ ಯುವ ಜನತೆಯ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಹೆಚ್‌ಐವಿ ಸೋಂಕನ್ನು ಆರಂಭದಲ್ಲಿಯೇ ಗುರ್ತಿಸಲು ಸರಳ ವಿಧಾನವಾದ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ವೈಯಕ್ತಿಕ ಸ್ಥಿತಿ ತಿಳಿಯಲು ಜಿಲ್ಲಾಧ್ಯಂತ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು.
ಈಗಾಗಲೆ ವೈದ್ಯರು, ಸಿಬ್ಬಂದಿಯರು ಅಭಿಯಾನವನ್ನು ಯಶಸ್ವಿಯಾಗಿ ಕೈಗೊಂಡಿದ್ದು ಸಂತಸದಾಯಕವಾಗಿದೆ. ಆದರೂ ಸಹ ಗೌಪ್ಯತೆಯೊಂದಿಗೆ ಸ್ವಯಂ ಪರೀಕ್ಷೆ ಮಾಡಿಕೊಳ್ಳಲು ಸಹಾಯಕವಾದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಶ್ನೋತ್ತರದಲ್ಲಿ ಸ್ವಯಂ ಉತ್ತರಗಳಿಂದ, ಸೋಂಕು ಹರಡಬಹುದಾದ ಸಾಧ್ಯತೆಗಳಿದ್ದಲ್ಲಿ ಕನಿಷ್ಟ ಶೇ. 95 ರಷ್ಟು ಜನ ತಪಾಸಣೆ ಮಾಡಿಸಿಕೊಳ್ಳಲು, ಖಚಿತಪಟ್ಟ ಸೋಂಕಿತರಲ್ಲಿ ಶೇ.95 ರಷ್ಟು ಜನರನ್ನು ಎಆರ್‌ಟಿ ಕೇಂದ್ರಗಳಿಗೆ ಚಿಕಿತ್ಸೆಗೆ ಬರುವಂತೆ ಮಾಡಲು ಹಾಗೂ ಸೋಂಕಿತರಾಗಿ ಎಆರ್‌ಟಿ ಚಿಕಿತ್ಸೆ ಪಡೆಯುವರಲ್ಲಿ ಶೇ.95 ರಷ್ಟು ಜನರನ್ನು ಸದಾ ನಿಗಾವಣೆ, ಆಪ್ತ ಸಮಾಲೋಚನೆ, ಜಾಗೃತಿ ಮೂಲಕ ಚಿಕಿತ್ಸೆ ಬಿಡದಂತೆ ವೈರಲ್ ಲೋಡ್ ಹೆಚ್ಚಾಗದಂತೆ ಮೂಲ ಉದ್ದೇಶ ತಲುಪಿಸಬೇಕೆಂದು ಸಂಬಅಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರಾಯಚೂರು ಮತ್ತು ಸಿಂಧನೂರುನಲ್ಲಿರುವ ಬ್ಲಡ್ ಬ್ಯಾಂಕ್‌ಗಳನ್ನು ಪ್ರತಿ ತಿಂಗಳು ಶಿಬಿರ ಏರ್ಪಡಿಸಿ, ರಕ್ತದ ಕೊರತೆಯಾಗದಂತೆ ನೋಡಿಬೇಕು. ಸಂಗ್ರಹಣೆಯ ಶೇ.25 ರಷ್ಟು ರಿಮ್ಸ್ ಬ್ಲಡ್ ಬ್ಯಾಂಕ್‌ಗೆ ನೀಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ನಂತರ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಿಎಚ್‌ಓ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ, ಡಿಪಿಡಿಓ ಡಾ.ಚಂದ್ರಶೇಖರಯ್ಯ ಸ್ವಾಮಿ, ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಂ.ಎನ್., ಡಿಎಸ್‌ಓ ಡಾ.ಗಣೇಶ್ ಕೆ, ಡಿಟಿಓ ಡಾ.ಮಹ್ಮದ್ ಶಾಕೀರ್ ಮೊಹಿಯುದ್ದೀನ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net