ಶ್ರೀಮಠದಿಂದ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಪ್ರೇಮ ಜೋರಡ್ಡಿ, ಸಾಮಾಜಿಕ ಸೇವೆ-ಕೆ.ಎಸ್.ರಾಜಣ್ಣ, ಸಂಗೀತ-ರೆಹಮಾನ್ ಸಾಬ್ ನದಾಫ್, ಪಾರಂಪರಿಕ ವೈದ್ಯಕೀಯ-ಲೋಕೇಶ ಟೇಕಲ್ ಅವರಿಗೆ ನಿರುಪಾದಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಗಳೂರಿನ ಸಿದ್ಧಲಿಂಗ ಶಿವಾಚಾರ್ಯರು, ಕುಷ್ಟಗಿಯ ಕರಿಬಸವ ಶಿವಾಚಾರ್ಯರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಸಿರಗುಪ್ಪದ ಬಸವಭೂಷಣ ದೇವರು, ತುರ್ವಿಹಾಳದ ಅಮರಗುಂಡ ಶಿವಾಚಾರ್ಯರು, ಉಟಕನೂರಿನ ಮರಿಬಸವಲಿಂಗ ದೇವರು, ಅಂಕಸದೊಡ್ಡಿಯ ವಾಮದೇವ ಶಿವಾಚಾರ್ಯರು ಇತರರಿದ್ದರು.