ಸ್ವ ಉದ್ಯೋಗದಿಂದ ಆರ್ಥಿಕ ಅಭಿವೃದ್ಧಿ

ಪೋತ್ನಾಳ ಗ್ರಾಮದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಎಸ್‌ಕೆಡಿಆರ್‌ಡಿಪಿ ತಾಲೂಕು ಯೋಜನಾಧಿಕಾರಿ ಸುನೀತಾ ಪ್ರಭು ಉದ್ಘಾಟಿಸಿದರು.
ಪೋತ್ನಾಳ ಗ್ರಾಮದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಎಸ್‌ಕೆಡಿಆರ್‌ಡಿಪಿ ತಾಲೂಕು ಯೋಜನಾಧಿಕಾರಿ ಸುನೀತಾ ಪ್ರಭು ಉದ್ಘಾಟಿಸಿದರು.
Published on
ಮಾನ್ವಿ: ಮಹಿಳೆಯರು ಸ್ವಾವಲಂಬಿ ಜೀವನ ಕಂಡುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಎಸ್‌ಕೆಡಿಆರ್‌ಡಿಪಿ ತಾಲೂಕು ಯೋಜನಾಧಿಕಾರಿ ಸುನೀತಾ ಪ್ರಭು ಹೇಳಿದರು.
ತಾಲೂಕಿನ ಪೋತ್ನಾಳ ಗ್ರಾಮದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್  ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 
ಸಂಘದ ಮಹಿಳೆಯರು ಹಣ ಉಳಿತಾಯದ ಜತೆಗೆ  ಸ್ವ ಉದ್ಯೋಗ ಕೈಗೊಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ. 
ಹೊಲಿಗೆ ತರಬೇತಿ ಪಡೆದ ಸದಸ್ಯರು ಮನೆಯಲ್ಲಿ ಕೆಲಸ ಆರಂಭಿಸಿ ಆರ್ಥಿಕ ಅಭಿವೃದ್ಧಿ ಹೊಂದಬೇಕು. ಇದರಿಂದ ಕುಟುಂಬಕ್ಕೂ ನೆರವಾಗಲಿದೆ ಎಂದರು. ಗ್ರಾಪಂ ಸದಸ್ಯ ಬೀರಪ್ಪ, ವಾಲ್ಮೀಕಿ ಸಮುದಾಯ ಭವನದ ಕಮಿಟಿ ಸದಸ್ಯ ಹನುಮೇಶ್, ವಲಯದ ಮೇಲ್ವಿಚಾರಕ ರಾಘವೇಂದ್ರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜ್ಯೋತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net