ಪೌಷ್ಟಿಕ ಆಹಾರ ಸೇವಿಸಿ

ಮುದಗಲ್ ಸಮೀಪದ ನಾಗರಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮಾನ ಸ್ಕಂದ ಶಿಕ್ಷಕರ ತರಬೇತಿಯಲ್ಲಿ ವೈದ್ಯಾಧಿಕಾರಿ ವಿಜಯಕಯಮಾರ್ ಪತ್ತಾರ ಮಾತನಾಡಿದರು. ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕಿ ಗೌರಮ್ಮ ನಾಯಕ, ಶಿಕ್ಷಕಿ ಸುವರ್ಣ ಇತರರಿದ್ದರು.
ಮುದಗಲ್ ಸಮೀಪದ ನಾಗರಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮಾನ ಸ್ಕಂದ ಶಿಕ್ಷಕರ ತರಬೇತಿಯಲ್ಲಿ ವೈದ್ಯಾಧಿಕಾರಿ ವಿಜಯಕಯಮಾರ್ ಪತ್ತಾರ ಮಾತನಾಡಿದರು. ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕಿ ಗೌರಮ್ಮ ನಾಯಕ, ಶಿಕ್ಷಕಿ ಸುವರ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಎಚ್‌ಸಿ ವೈದ್ಯ ವಿಜಯಕುಮಾರ ಪತ್ತಾರ ಸಲಹೆ
  • ಮುದಗಲ್ ನಾಗರಹಾಳ ತರಬೇತಿ ಕಾರ್ಯಕ್ರಮ
ಮುದಗಲ್: ಹದಿಹರೆಯದ ಮಕ್ಕಳು ರಕ್ತಹೀನತೆ (ಅನಿಮಿಯಾ) ತಡೆಯಲು ಕಡ್ಡಾಯವಾಗಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ನಾಗರಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ವಿಜಯಕುಮಾರ ಪತ್ತಾರ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರ್‌ಕೆಎಸ್‌ಕೆ ಕಾರ್ಯಕ್ರಮದಡಿ ಪಟ್ಟಣ ಸಮೀಪದ ನಾಗರಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾನ ಸ್ಕಂದ ಶಿಕ್ಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಕುರಿತು ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕಿ ಗೌರಮ್ಮ ನಾಯಕ ಮಾಹಿತಿ ನೀಡಿದರು. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸ್ಕಂದ ಶಿಕ್ಷಕರ ತರಬೇತಿಯಲ್ಲಿ ಪೌಷ್ಟಿಕ ಆಹಾರದ ಕುರಿತು ಕಿರು ನಾಟಕ ಮಾಡಿಸುವ ಮೂಲಕ ಜಾಗೃತಿ ಮೂಡಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಶ್ರೀದೇವಿ, ಅಕ್ಕಮಹಾದೇವಿ, ಶಿಕ್ಷಕಿ ಸುವರ್ಣ ಹಾಗೂ ವಿದ್ಯಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net