ಹಿಂದೂ ಧರ್ಮದ ಸಂರಕ್ಷಣೆಗೆ ಉಭಯ ಕ್ಷೇತ್ರ ಒತ್ತು

ಮಂತ್ರಾಲಯದಲ್ಲಿ ಗುರುವಾರ ರಾಯರ 355 ನೇ ಆರಾಧನಾ ಮಹೋತ್ಸವದ ಅಂಗವಾಗಿ ಮೊದಲ ದಿನ ತಿರುಪತಿ ತಿರುಮಲ ದೇವಸ್ಥಾನದಿಂದ ತರಲಾದ ಶೇಷವಸ್ತ್ರವನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ಸಮರ್ಪಣೆ ಮಾಡಿದರು. ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷಾಧಿಕಾರಿ ಆನಂದ ತೀರ್ಥಾಚಾರ್ಯ ಪಗಡಾಲ, ಶ್ರೀಮಠದ ವಿದ್ಯಾಪೀಠದ ಪ್ರಾಚಾರ್ಯ ಡಾ.ಎನ್. ವಾದಿರಾಜಾಚಾರ್ಯ ಇದ್ದರು.
ಮಂತ್ರಾಲಯದಲ್ಲಿ ಗುರುವಾರ ರಾಯರ 355 ನೇ ಆರಾಧನಾ ಮಹೋತ್ಸವದ ಅಂಗವಾಗಿ ಮೊದಲ ದಿನ ತಿರುಪತಿ ತಿರುಮಲ ದೇವಸ್ಥಾನದಿಂದ ತರಲಾದ ಶೇಷವಸ್ತ್ರವನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ಸಮರ್ಪಣೆ ಮಾಡಿದರು. ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷಾಧಿಕಾರಿ ಆನಂದ ತೀರ್ಥಾಚಾರ್ಯ ಪಗಡಾಲ, ಶ್ರೀಮಠದ ವಿದ್ಯಾಪೀಠದ ಪ್ರಾಚಾರ್ಯ ಡಾ.ಎನ್. ವಾದಿರಾಜಾಚಾರ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ಅನುಗ್ರಹ ಸಂದೇಶ
ರಾಯಚೂರು

ತಿರುಮಲ ವೆಂಕಟೇಶ್ವರ ದೇವರು ಹಾಗೂ ಮಂತ್ರಾಲಯ ರಾಯರ ಮಠದ ಮಧ್ಯೆ ಅವಿನಾಭಾವ ಸಂಬಂಧವಿದೆ. ಇದು ಪರಮಪವಿತ್ರ ಹಾಗೂ ಸದಾಕಾಲ ಉಳಿಯುವಂಥದ್ದಾಗಿದೆ. ಹೀಗಾಗಿ ರಾಯರ ಮಠದಲ್ಲಿ ನಡೆಯುವ ಎಲ್ಲ ಪ್ರಮುಖ ಧಾರ್ಮಿಕ ಆಚರಣೆ ಸಂದರ್ಭ ಶೇಷವಸ್ತ್ರ ಸಮರ್ಪಣೆ ಮೂಲಕ ಗೌರವಿಸಿ ಅನುಗ್ರಹಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ ಎಂದು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನುಡಿದರು.

ಅವರು ಮಂತ್ರಾಲಯದಲ್ಲಿ ಗುರುವಾರ ರಾಯರ 355 ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಸಪ್ತರಾತ್ರೋತ್ಸವದ ಮೊದಲ ದಿನ ತಿರುಪತಿ ತಿರುಮಲ ದೇವಸ್ಥಾನದಿಂದ ತರಲಾದ ಶೇಷವಸ್ತ್ರ ಸಮರ್ಪಣೆ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು. ತಿರುಪತಿ ವೆಂಕಟರಮಣನ ಅನುಗ್ರಹದಿಂದಲೇ ರಾಯರು ಜನಿಸಿದ್ದು. ರಾಯರ ಕ್ಷೇತ್ರ ಮಂತ್ರಾಲಯ ಹಾಗೂ ತಿರುಪತಿ ಮಧ್ಯೆ ಇದೇ ಕಾರಣಕ್ಕೆ ಅವಿನಾಭಾವ ಸಂಬಂಧವಿದೆ. ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಿರುವ ಕೇತ್ರಗಳಾಗಿದ್ದು, ವಿಶ್ವಮಟ್ಟದಲ್ಲಿ ಹಿಂದೂ ಧರ್ಮ ಸಂರಕ್ಷಣೆ ಕಾರ್ಯದಲ್ಲಿ ತೊಡಗಿವೆ ಎಂದರು.
ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಹಾಗೂ ಮಂತ್ರಾಲಯದ ಆಡಳಿತ ಎರಡೂ ಜತೆಗೂಡಿ ಮುನ್ನಡೆಯುತ್ತಿದ್ದು ಎರಡೂ ಕ್ಷೇತ್ರಗಳ ಮಧ್ಯೆ ಪೈಪೋಟಿಯಿಲ್ಲ. ಬದಲಿಗೆ ಸೌಹಾರ್ದಯುತ ಬಾಂಧವ್ಯ ಇದೆ. ತಿರುಪತಿಯ ದಾಸಸಾಹಿತ್ಯ ಪ್ರಾಜೆಕ್ಟ್ ಅನೇಕ ರೀತಿಯ ಕಾರ್ಯಕ್ರಮಗಳ ಮೂಲಕ ದಾಸ ಸಾಹಿತ್ಯ ಪ್ರಸಾರ ಕಾರ್ಯ ಮಾಡುತ್ತಿದೆ. ಅದೇ ಮಾದರಿಯಲ್ಲಿ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್‌ಕೂಡಾ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ತಿರುಮಲದಲ್ಲಿ ಟಿಟಿಡಿ ಸಹಕಾರದಿಂದ ರಾಯರ ಮಠ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಜಾಗ ದೊರೆತು ಕಟ್ಟಡ ನಿರ್ಮಾಣ ಮಾಡಲಾಗಿದೆ. ತಿರುಮಲ ಬೆಟ್ಟದಲ್ಲಿ ರಾಯರ ಮಠಕ್ಕೆ ಅನೇಕ ರೀತಿಯಿಂದ ಟಿಟಿಡಿ ಸಹಾಯ ಹಸ್ತಚಾಚಿದೆ. ಅಂತೆಯೇ ಭಕ್ತರಿಗೆ ಅನೇಕ ರೀತಿಯಲ್ಲಿ ಸೌಲಭ್ಯ ಒದಗಿಸಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷಾಧಿಕಾರಿ ಆನಂದ ತೀರ್ಥಾಚಾರ್ಯ ಪಗಡಾಲ, ಶ್ರೀಮಠದ ವಿದ್ಯಾಪೀಠದ ಪ್ರಾಚಾರ್ಯ ಡಾ.ಎನ್. ವಾದಿರಾಜಾಚಾರ್ಯ, ಪಿಆರ್‌ಒ ಐ.ಪಿ.ನರಸಿಂಹಮೂರ್ತಿ, ಟಿಟಿಡಿಯ ಹಿರಿಯ ಅಧಿಕಾರಿಗಳಿದ್ದರು.
ಇದಕ್ಕೂ ಮೊದಲು ಟಿಟಿಡಿ ಕರೆತಂದ ವೆಂಕಟೇಶ ದೇವರ ಶೇಷ ವಸ್ತ್ರವನ್ನು ಶ್ರೀಮಠದಿಂದ ಬರಮಾಡಿಕೊಂಡು ಮೊದಲಿಗೆ ರಾಯರ ಬೃಂದಾವನಕ್ಕೆ ಸಮರ್ಪಿಸಲಾಯಿತು. ಆನಂತರ ಸ್ವಾಮಿಗಳಿಗೆ ಶೇಷವಸ್ತ್ರ ಹೊದಿಸಿ ಗೌರವಿಸಲಾಯಿತು. ಸಾವಿರಾರು ಸಂಖ್ಯೆಯ ಭಕ್ತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net