ಪೊಲೀಸ್ ಇಲಾಖೆಯಿಂದ ಮಾದಕ ವಸ್ತುಗಲ ಜಾಗೃತಿ ಕಾರ್ಯಕ್ರಮ

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ  ಮಾದಕ ವಸ್ತು ಜಾಗೃತಿ ಮತ್ತು ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಮಾನಸಿಕ ರೋಗ ತಜ್ಞ ಡಾ.ರಮೇಶ್ ಬಾಬು ಬಿ.,  ಮಾದಕ ವಸ್ತುಗಳ ನಿಯಂತ್ರಣಾಧಿಕಾರಿ ಡಾ.ಉದಯ್ ಕಿಶೋರ್ ಪಿ., ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ. ಹನುಮಂತಪ್ಪ, ಎಎಸ್ಪಿ  ಹರೀಶ ಜಿ., ಡಿವೈಎಸ್‌ಪಿ ಶಾಂತವೀರ ಈ. ಇದ್ದರು.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಾದಕ ವಸ್ತು ಜಾಗೃತಿ ಮತ್ತು ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಮಾನಸಿಕ ರೋಗ ತಜ್ಞ ಡಾ.ರಮೇಶ್ ಬಾಬು ಬಿ., ಮಾದಕ ವಸ್ತುಗಳ ನಿಯಂತ್ರಣಾಧಿಕಾರಿ ಡಾ.ಉದಯ್ ಕಿಶೋರ್ ಪಿ., ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ. ಹನುಮಂತಪ್ಪ, ಎಎಸ್ಪಿ ಹರೀಶ ಜಿ., ಡಿವೈಎಸ್‌ಪಿ ಶಾಂತವೀರ ಈ. ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾದಕ ವಸ್ತುಗಳ ವಿರುದ್ಧ ನಿರಂತರ ದಾಳಿ ಎಸ್ಪಿ ಅರುಣಾಂಗ್ಶು ಗಿರಿ ಹೇಳಿಕೆ
ರಾಯಚೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮಾದಕ ವಸ್ತುಗಳನ್ನು ನಿರಂತರವಾಗಿ ಜಪ್ತಿ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೆ 122 ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದು, 128 ಜನರನ್ನು ಬಂಧಿಸಲಾಗಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಬುಧವಾರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ವಸ್ತು ಜಾಗೃತಿ ಮತ್ತು ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಪ್ರಕರಣಗಳ ಹೆಚ್ಚಾಗಿ ಕಂಡುಬಂದಿದ್ದು, ಪ್ರಪಂಚದಾದ್ಯಂತ ಸುಮಾರು 246 ಮಿಲಿಯನ್ ಜನರು ಈ ಮಾದಕ ವಸ್ತುಗಳ ವ್ಯಸನಕ್ಕೆತುತ್ತಾಗಿದ್ದಾರೆ.
ಆದ್ದರಿಂದ ಯುವಜನತೆ ಇಂತಹ ವ್ಯಸನಿಗಳಿಂದ ಹಾಗೂ ಮಾದಕ ವಸ್ತುಗಳ ಜಾಲದಿಂದ ದೂರವಿರಬೇಕು. ಒಂದು ದೇಶವನ್ನು ಹಾಳು ಮಾಡಲು ಯಾವುದೇ ಬಾಂಬುಗಳ ಅವಶ್ಯಕತೆಯಿಲ್ಲ; ಅಲ್ಲಿನಯುವ ಪೀಳಿಗೆಯನ್ನು ಮಾದಕ ವಸ್ತುಗಳ ವ್ಯಸನಿಗಳನ್ನಾಗಿ ಮಾಡಿದರೆ ಸಾಕು, ಆ ದೇಶತಾನಾಗಿಯೇ ನಾಶವಾಗುತ್ತದೆ. ಆದ್ದರಿಂದ ನಮ್ಮ ಯುವ ಜನತೆಯನ್ನು ಈ ಭೀಕರ ಪಿಡುಗಿನಿಂದ ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ದರಾಮಪ್ಪ ಕಲ್ಯಾಣರಾವ್ ಮಾತನಾಡಿ, ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮತ್ತು ನೆರವು ಅತ್ಯಂತ ಅವಶ್ಯಕವಾಗಿದೆ. ಆರ್ಥಿಕವಾಗಿ ಹಿಂದುಳಿದವರು ಉಚಿತವಾಗಿ ಕಾನೂನು ನೆರವನ್ನು ಪಡೆಯಲು ಅವಕಾಶವಿದೆ ಎಂದರು. ಬರುವ ಜುಲೈ 11, 2026 ರಂದು ಹಮ್ಮಿಕೊಳ್ಳಲಾಗಿರುವ ಲೋಕ ಅದಾಲತ್‌ನ ಸದುಪಯೋಗವನ್ನು ಪಡೆದುಕೊಳ್ಳುಬೇಕು ಎಂದರು.
ಮಾನಸಿಕ ರೋಗ ತಜ್ಞ ಡಾ.ರಮೇಶ್ ಬಾಬು ಬಿ. ಮಾತನಾಡಿ, ಮಾದಕ ವಸ್ತುಗಳು ಹಾಗೂ ಮದ್ಯ ಸೇವನೆಯಿಂದ ಮೆದುಳಿನ ಮೇಲಾಗುವ ದುಷ್ಪರಿಣಾಮಗಳು ಹಾಗೂ ಇದರಿಂದ ಉಂಟಾಗುವ ಬುದ್ದಿ ಅಸ್ಥಿರತೆ ಮತ್ತು ನಡವಳಿಕೆಯ ಬದಲಾವಣೆಗಳ ಕುರಿತು ವೈಜ್ಞಾನಿಕವಾಗಿ ಬುದ್ದನ ಆಷ್ಠಾಂಗ ಮಾರ್ಗಗಳನ್ನು, ಬಸವಣ್ಣನವರ ತತ್ವಗಳನ್ನು ಹಾಗೂ ಅವಶ್ಯಕತೆಗಿಂತ ಹೆಚ್ಚಾಗಿ ಎಲ್ಲಾ ವಿದ್ಯಾರ್ಥಿಗಳು ಅಂಬೇಡ್ಕ್ರಂತೆ ಕೇವಲ ಶಿಕ್ಷಣದ ಕಡೆ ಮಾತ್ರ ಗಮನವಹಿಸಬೇಕೆಂದು, ಮುಖ್ಯವಾಗಿ ಹಾಲು ಕುಡಿಯುವ ನಾಲಿಗೆಗೆ ಮಧ್ಯ ಸೇವನೆ ಮಾಡಬೇಡಿ ಎಂದರು.
ಈ ಸಂದರ್ಭದಲ್ಲಿ ಮಾದಕ ವಸ್ತುಗಳ ನಿಯಂತ್ರಣಾಧಿಕಾರಿ ಡಾ.ಉದಯ್ ಕಿಶೋರ್ ಪಿ., ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ. ಹನುಮಂತಪ್ಪ, ಎಎಸ್ಪಿ ಹರೀಶ ಜಿ., ಡಿವೈಎಸ್‌ಪಿ ಶಾಂತವೀರ ಈ , ಪಿಎಸ್‌ಐ ಮಂಜುನಾಥ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net