ಗ್ರಾಮೀಣ ಭಾಗಕ್ಕೆ ಸರಿಯಾಗಿ ಬಸ್ ಓಡಿಸಿ

ಗಬ್ಬೂರಿನಲ್ಲಿ ಡಿಪೋ ಮ್ಯಾನೇಜರ್ ರಾಜಶೇಖರ್‌ಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಮುಖಂಡರಾದ ಶಾಂತಕುಮಾರ ಹೊನ್ನಟಗಿ, ರೂಪಾ, ಶ್ರೀದೇವಿ ನಾಯಕ, ಹನುಮಂತ ಮನ್ನಾಪುರ, ರಾಜಪ್ಪ ಸಿರವಾರಕರ್ ಇತರರಿದ್ದರು.
ಗಬ್ಬೂರಿನಲ್ಲಿ ಡಿಪೋ ಮ್ಯಾನೇಜರ್ ರಾಜಶೇಖರ್‌ಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಮುಖಂಡರಾದ ಶಾಂತಕುಮಾರ ಹೊನ್ನಟಗಿ, ರೂಪಾ, ಶ್ರೀದೇವಿ ನಾಯಕ, ಹನುಮಂತ ಮನ್ನಾಪುರ, ರಾಜಪ್ಪ ಸಿರವಾರಕರ್ ಇತರರಿದ್ದರು.
Published on
ದೇವದುರ್ಗ: ಗಬ್ಬೂರು ಹೋಬಳಿಯ ವಿವಿಧ ಗ್ರಾಮಗಳಿಗೆ ಶಾಲಾ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಬಿಡುವಂತೆ ಒತ್ತಾಯಿಸಿ ಗಬ್ಬೂರಿನ ಬೂದಿಬಸವೇಶ್ವರ ಕಮಾನ್ ಬಳಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಗಬ್ಬೂರುಗೆ ಗೂಗಲ್, ರಾಮದುರ್ಗ, ಮಲದಕಲ್, ಎನ್.ಗಣೇಕಲ್ ಸೇರಿ ವಿವಿಧ ಗ್ರಾಮಗಳಿಂದ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಸಮಸ್ಯೆಯಾಗುತ್ತಿದೆ. ಗಬ್ಬೂರಿನಿಂದ ರಾಯಚೂರು ಹಾಗೂ ದೇವದುರ್ಗಕ್ಕೆ ಉನ್ನತ ಶಿಕ್ಷಣ ಕಲಿಕೆಗೆ ಹೋಗಲು ಸಮಸ್ಯೆಯಾಗುತ್ತಿದೆ. ಹಲವು ವಿದ್ಯಾರ್ಥಿಗಳು ಶಾಲೆ ಅರ್ಧಕ್ಕೆ ಬಿಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರಾಮದುರ್ಗ, ಗೂಗಲ್, ಮಲದಕಲ್, ಎನ್.ಗಣೇಕಲ್ ಸೇರಿ ಹೆಚ್ಚಿನ ವಿದ್ಯಾರ್ಥಿಗಳು ಗಬ್ಬೂರಿಗೆ ಓದಲು ಬರುವ ಕಡೆ ಸಮಯಕ್ಕೆ ಸರಿಯಾಗಿ ಬಸ್ ಬಿಡಬೇಕು. ಬೆಳಗ್ಗೆ 8ಗಂಟೆ, ಮಧ್ಯಾಹ್ನ 2.30 ಹಾಗೂ ಸಂಜೆ 4.30ಕ್ಕೆ ನಿತ್ಯ ಬಸ್ ಓಡಿಸಬೇಕು. ಗಬ್ಬೂರಿನ ಬಸ್ ನಿಲ್ದಾಣದಲ್ಲಿನ ಶೌಚಗೃಹ ಸರಿಯಾಗಿ ನಿರ್ವಹಣೆ ಮಾಡಬೇಕು. ನಿರ್ಲಕ್ಷೃ ಮಾಡಿದರೆ ರಸ್ತೆ ಸಂಚಾರ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ಬಸ್ ಡಿಪೋ ಮ್ಯಾನೇಜರ್ ರಾಜಶೇಖರ ಆಗಮಿಸಿ ಮನವಿ ಸ್ವೀಕರಿಸಿ, ಮುಂದಿನ ದಿನಗಳಲ್ಲಿ ಸಕಾಲಕ್ಕೆ ಬಸ್ ಓಡಿಸುವ ಭರವಸೆ ನೀಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ಶಾಂತಕುಮಾರ ಹೊನ್ನಟಗಿ, ರೂಪಾ, ಶ್ರೀದೇವಿ ನಾಯಕ, ಹನುಮಂತ ಮನ್ನಾಪುರ, ರಾಜಪ್ಪ ಸಿರವಾರಕರ್, ಬೂರೆಪ್ಪ ಮರೆಡ್ಡಿ, ಸಂಗಮೇಶ ನಾಯಕ, ಜಾಕೂಬ್ ಟೇಲರ್ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net