ನಾಟಕಗಳು ಸಮಾಜದ ಪ್ರತಿಬಿಂಬ

ಮಸ್ಕಿಯ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಕೊಡಲ್ಲ ಅಂದ್ರ ಕೊಡಲ್ಲ ನಾಟಕವನ್ನು ಸಾಹಿತಿ ದಾನಪ್ಪ ಉದ್ಘಾಟಿಸಿದರು. ಪ್ರಮುಖರಾದ ವಿದ್ಯಾವತಿ ವನಕಿ, ಪಂಪಾಪತಿ ಹೂಗಾರ, ಕಳಕಪ್ಪ ಹಾದಿಮನಿ, ಈರಮ್ಮ, ಆದಯ್ಯಸ್ವಾಮಿ ಕ್ಯಾತ್ನಟ್ಟಿ ಇತರರಿದ್ದರು.
ಮಸ್ಕಿಯ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಕೊಡಲ್ಲ ಅಂದ್ರ ಕೊಡಲ್ಲ ನಾಟಕವನ್ನು ಸಾಹಿತಿ ದಾನಪ್ಪ ಉದ್ಘಾಟಿಸಿದರು. ಪ್ರಮುಖರಾದ ವಿದ್ಯಾವತಿ ವನಕಿ, ಪಂಪಾಪತಿ ಹೂಗಾರ, ಕಳಕಪ್ಪ ಹಾದಿಮನಿ, ಈರಮ್ಮ, ಆದಯ್ಯಸ್ವಾಮಿ ಕ್ಯಾತ್ನಟ್ಟಿ ಇತರರಿದ್ದರು.
Published on
ಮಸ್ಕಿ: ನಾಟಕಗಳು ಸಮಾಜದ ಪ್ರತಿಬಿಂಬವಾಗಿದ್ದು, ನಮ್ಮ ನಡುವೆ ನಡೆಯುವ ಘಟನೆಗಳನ್ನು ಕನ್ನಡಿಯಂತೆ ತೋರಿಸುತ್ತವೆ ಎಂದು ಸಾಹಿತಿ ಸಿ.ದಾನಪ್ಪ ಹೇಳಿದರು. 
ಪಟ್ಟಣದ ಶ್ರೀಭ್ರಮರಾಂಬ ದೇವಸ್ಥಾನದಲ್ಲಿ ಕಸಾಪ ತಾಲೂಕು ಘಟಕ, ಸರ್ಕಾರಿ ನೌಕರರ ಸಂಘ, ತಾಲೂಕು ವೈಜ್ಞಾನಿಕ ಪರಿಷತ್ತು, ಸಾವಿತ್ರಿಬಾಯಿ ಫುಲೆ ಸಂಘಟನೆ, ಇತ್ಲಿ ಪೌಂಡೇಶನ್, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ನಿರ್ದಿಗಂತ ತಂಡ ಮೈಸೂರು ಪ್ರಸ್ತುತಪಡಿಸಿದ ‘ಕೊಡಲ್ಲ ಅಂದ್ರ ಕೊಡಲ್ಲ’ ನಾಟಕ ಉದ್ಘಾಟಿಸಿ ಮಾತನಾಡಿದರು. ಗ್ಯಾಟ್ ಒಪ್ಪಂದ ಬಳಿಕ ಕೊಳ್ಳುವ ಸಂಸ್ಕೃತಿ ಹೆಚ್ಚಿದ್ದು, ಜನರು ದುಡಿದು ಹಣ ಉಳಿಸುವ ಸಂಸ್ಕೃತಿಯಿಂದ ಕೊಳ್ಳುವ ಸಂಸ್ಕೃತಿಗೆ ತಳ್ಳಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಶಿವಶರಣಪ್ಪ ಇತ್ಲಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ ಒಂದೇ ವೇದಿಕೆಯಲ್ಲಿ ಸಮಾಗಮವಾಗುವ ಮಾಧ್ಯಮವಾಗಿದೆ. ಪ್ರೇಕ್ಷಕರು ಕಲಾವಿದರನ್ನು ಬೆಳೆಸಲು ನಾಟಕ ನೋಡಬೇಕು ಎಂದರು. ನಿರ್ದಿಗಂತ ತಂಡದ ಕಲ್ಲಪ್ಪ ಪೂಜಾರ್ ಮಾತನಾಡಿ, ಕೊಡಲ್ಲ ಅಂದ್ರ ಕೊಡಲ್ಲ ನಾಟಕ 50ನೇ ಪ್ರದರ್ಶನವಾಗಿದೆ ಎಂದರು. 
ಕಸಾಪ ತಾಲೂಕು ಅಧ್ಯಕ್ಷೆ ವಿದ್ಯಾವತಿ ವನಕಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಪಾಪತಿ ಹೂಗಾರ, ವೈಜ್ಞಾನಿಕ ಪರಿಷತ್ತು ಅಧ್ಯಕ್ಷ ಕಳಕಪ್ಪ ಹಾದಿಮನಿ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಈರಮ್ಮ, ಲಯನ್ಸ್ ಕ್ಲಬ್ ನಿರ್ದೇಶಕ ಆದಯ್ಯಸ್ವಾಮಿ ಕ್ಯಾತ್ನಟ್ಟಿ ಇತರಿರದ್ದರು.  
ಪ್ರೇಕ್ಷಕರನ್ನು ನಗಿಸಿದ ಕಲಾವಿದರು: ನಿತ್ಯ ಜೀವನದಲ್ಲಿ ಕೊಳ್ಳುವ ಮತ್ತು ಮಾರುವ ವಸ್ತುಗಳು, ಸೇವೆಗಳ ಮೇಲೆ ತೆರಿಗೆ ವಿಧಿಸಿ ಜನಸಾಮಾನ್ಯರ ಜೀವನದ ಸಂಕಷ್ಟವನ್ನು ವಿಡಂಬನಾತ್ಮಕವಾಗಿ ‘ಕೊಡಲ್ಲ ಅಂದ್ರ ಕೊಡಲ್ಲ’ ನಾಟಕ ಪ್ರತಿಬಿಂಬಿಸಿತು. ರಂಗ ಕಲಾವಿದರಾದ ಹುಬ್ಬಳ್ಳಿಯ ಮಂಜುನಾಥ ಮಡಲಗಿರಿ, ಧಾರವಾಡದ ಸಲ್ಮಾ ದಂಡಿನ್, ಮಂಗಳೂರಿನ ಚರಿತ್ ಸುವರ್ಣ,  ಶಿವಮೊಗ್ಗದ ದಿನೇಶ ನಾಯ್ಕ, ಉಡುಪಿಯ ಚರಿತ ಶಾರದ ಅವರ ಅಭಿನಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net