ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದ ವಾರ್ಷಿಕೋತ್ಸವ ಜೀವನದಲ್ಲಿ ಸಾಧನೆ ಮಾಡಲು ಡಾ.ಗೊ. ರು ಚನ್ನಬಸಪ್ಪ ಸೂಚನೆ

 ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದಿಂದ ಆಯೋಜಿಸಿದ್ದ  2ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಅಖಿಲ ಭಾರತ ಶರಣ  ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಡಾ.ಗೊ. ರು ಚನ್ನಬಸಪ್ಪ , ನಿವೃತ್ತ ಪ್ರಾಚಾರ್ಯ ಡಾ.ಚನ್ನಬಸಯ್ಯ ಹಿರೇಮಠ, ಅಂಬಾಪತಿ ಪಾಟೀಲ್ ವಕೀಲ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸಪ್ಪ ತಿಪ್ಪಾರೆಡ್ಡಿ,ಮಸ್ಕಿ ನಾಗರಾಜ ವಕೀಲ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ವಕೀಲ, ವೀರಭದ್ರಪ್ಪ ವಕೀಲ, ಬಸನಗೌಡ ಜಂಬಲದಿನ್ನಿ, ಚಂದ್ರಶೇಖರ್, ಬಸವರಾಜ ಕಲ್ಲೂರು ವಕೀಲ ಇದ್ದರು.

Published on

ರಾಯಚೂರು ಡಾ.ಎಂ.ನಾಗಪ್ಪ ಅವರ ಜೀವನ ಸಾರ್ಥಕತೆಯ ಜೀವನ, ಪ್ರತಿಯೊಬ್ಬರು ಜೀವನದಲ್ಲಿ ಸಾಧನೆ ಮಾಡಿದಾಗ ಸಾರ್ಥಕವಾಗುತ್ತದೆ ಇದಕ್ಕೆ ಡಾ.ಎಂ.ನಾಗಪ್ಪ ಆದರ್ಶರಾಗಿದ್ದಾರೆಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಡಾ.ಗೊ. ರು ಚನ್ನಬಸಪ್ಪ ಹೇಳಿದರು.

ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದಿಂದ ಆಯೋಜಿಸಿದ್ದ 2ನೇ ವಾರ್ಷಿಕೋತ್ಸವ, ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು, ಡಾ.ಎಂ.ನಾಗಪ್ಪ ಅವರ ಜೀವನ ಸಾರ್ಥಕತೆಯ ಜೀವನ, ಪ್ರತಿಯೊಬ್ಬರು ಜೀವನದಲ್ಲಿ ಸಾಧನೆ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ ಇದಕ್ಕೆ ಡಾ.ಎಂ.ನಾಗಪ್ಪ ಆದರ್ಶರಾಗಿದ್ದಾರೆ ಎಂದರು.

ಮುಂದಿನ ವರ್ಷ ಡಾ.ಎಂ.ನಾಗಪ್ಪನವರ ಜನ್ಮಶತಮಾನೋತ್ಸವ ಇದ್ದು, ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಂಡು ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಬೇಕು. ಅವರ ವ್ಯಕ್ತಿತ್ವದ ಸಾರ್ಥಕತೆ ಶತಮಾನೋತ್ಸವ ಸಮಾರಂಭದಲ್ಲಿ ಸಂಭ್ರಮಿಸಬೇಕಿದೆ ಎಂದರು.

ರಾಜ್ಯದಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳು ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿವೆ. ಅಧಿಕಾರ ಮತ್ತು ಹಣ ಅಹಂ ಇದಕ ಕಾರಣವಾಗಿದೆ ಎಂದರು. ಜಗತ್ತಿನಲ್ಲಿ ಪ್ರಕ್ಷುಬ್ಧ ವಾತಾವರಣ ಸ್ಥಿತಿ ಇದೆ. ಅಮೆರಿಕಾ ಮತ್ತು ಇಸ್ರೇಲ್ ದೇಶಗಳು ತಮ್ಮ ಅಹಂಕಾರಕ್ಕಾಗಿ ಯುದ್ಧಕ್ಕೆ ಇಳಿದಿವೆ. ಈ ರೀತಿಯ ಬೆಳವಣಿಗೆ ಒಳ್ಳೆದಲ್ಲ. ಇಂತಹ ಸಂದರ್ಭದಲ್ಲಿ ವಿಶ್ವಸಂಸ್ಥೆ ಅಸಾಯಕವಾಗಿದೆ ಎಂದರು.

ನಂತರ ಸಮಾರಂಭದಲ್ಲಿ ಮಾನ್ವಿಯ ಖ್ಯಾತ ಸುಗಮ ಸಂಗೀತ ಗಾಯಕ ಪಂಡಿತ ಅಂಬಯ್ಯ ನುಲಿ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ಚನ್ನಬಸಯ್ಯ ಹಿರೇಮಠ, ಅಂಬಾಪತಿ ಪಾಟೀಲ್ ವಕೀಲ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸಪ್ಪ ತಿಪ್ಪಾರೆಡ್ಡಿ,ಮಸ್ಕಿ ನಾಗರಾಜ ವಕೀಲ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ವಕೀಲ, ವೀರಭದ್ರಪ್ಪ ವಕೀಲ, ಬಸನಗೌಡ ಜಂಬಲದಿನ್ನಿ, ಚಂದ್ರಶೇಖರ್, ಬಸವರಾಜ ಕಲ್ಲೂರು ವಕೀಲ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net