ಡಾ.ಅಂಬೇಡ್ಕರ್ ಕೊಡುಗೆಗಳು ಅಮೂಲ್ಯ

ಮುಷ್ಟೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ದೇವದುರ್ಗ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಭಾಗ್ಯ ಬಾಪುಗೌಡ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀದೇವಿ ನಾಯಕ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶಿವರಾಜ ಜಾನೇಕಲ್, ಅಂಬ್ರಯ್ಯ ಸ್ವಾಮಿ, ಶಿವಜಾತಯ್ಯ ಸ್ವಾಮಿ ಇತರರಿದ್ದರು.

Published on
ಅರಕೇರಾ: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾನತೆ ಮತ್ತು ನ್ಯಾಯಕ್ಕಾಗಿ ಜೀವನವನ್ನೇ ಮುಡಿಪಿಟ್ಟಿದ್ದರು ಎಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀದೇವಿ ನಾಯಕ ಹೇಳಿದರು. 
ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಜಯಂತ್ಯುತ್ಸವ ಪ್ರಯುಕ್ತ ಮೂರ್ತಿ ಅನಾವರಣ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. 
ಡಾ. ಅಂಬೇಡ್ಕರ್ ಅವರು ಆಧುನಿಕ ಭಾರತದ ನಿರ್ಮಾಣಕ್ಕೆ ನೀಡಿದ ಕೊಡುಗೆಗಳು ಅಮೂಲ್ಯವಾದವು. ಅವರು ಕೇವಲ ಸಂವಿಧಾನ ಶಿಲ್ಪಿಯಷ್ಟೇ ಅಲ್ಲದೆ, ಅರ್ಥಶಾಸ್ತ್ರಜ್ಞ, ಕಾರ್ಮಿಕ ನಾಯಕ ಮತ್ತು ಸಾಮಾಜಿಕ ಕ್ರಾಂತಿಕಾರಿಯಾಗಿದ್ದರು ಎಂದರು. 
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶಿವರಾಜ ಜಾನೇಕಲ್ ಮಾತನಾಡಿ, ಡಾ.ಅಂಬೇಡ್ಕರ್ ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ, ಭಾರತಕ್ಕೆ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ನೀಡಿದರು. ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯ ಖಚಿತಪಡಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದರು. ಸಮಾಜ, ರಾಜಕೀಯ ಮತ್ತು ಅರ್ಥಶಾಸ್ತ್ರದ ಬಗ್ಗೆ ಹೊಸ ಆಲೋಚನೆ ಹೊಂದಿದ್ದರು. ಜಾತಿ-ಮತಗಳ ಭೇದವಿಲ್ಲದ ಒಂದು ಬಲಿಷ್ಠ ಮತ್ತು ಸಮಾನ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ ಎಂದರು.
ಪ್ರಮುಖರಾದ ಅಂಬ್ರಯ್ಯ ಸ್ವಾಮಿ, ಶಿವಜಾತಯ್ಯ ಸ್ವಾಮಿ, ಗೌರಿ ನಾಯಕ, ಮಾಳೇಶ ಬೊಮ್ಮಾಳ, ಬಸವರಾಜ ಪೂಜಾರಿ, ಮರಿಲಿಂಗಪ್ಪ ಹೆಗ್ಗಡದಿನ್ನಿ, ಧನಂಜಯ ಶಿವಂಗಿ, ನರಸಮ್ಮ ವಕ್ಕಪ್ಪ, ಅಣ್ಣಾರಾವ್, ಮಲ್ಲಪ್ಪ ದೇವರಮನಿ, ಬಸವರಾಜ ಹಟ್ಟಿ, ರಾಜಕುಮಾರ ಡಿ., ಹಂಪಯ್ಯ ಕೆ., ಶಿವರಾಜ ಪೂಜಾರಿ, ಎನ್.ಲಿಂಗಪ್ಪ, ಮಹಾಂತೇಶ ಭವಾನಿ, ರೆಡ್ಡೆಪ್ಪ, ರಂಗಪ್ಪ ಹಾಳಜಾಡಲದಿನ್ನಿ, ರಾಮಣ್ಣ ಎನ್.ಗಣೇಕಲ್, ಸಿದ್ದಲಿಂಗಪ್ಪ ಕಾಕರಗಲ್ ಇತರರಿದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net