ಸಿಂಧನೂರಿನಲ್ಲಿ ರಾಜ್ಯ ಪಂಚಾಯತ್‌ರಾಜ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ತಾಪಂ ಎಡಿ ವೆಂಕಪ್ಪ ಕುರುಕುಂದಗೆ ಮನವಿ ಸಲ್ಲಿಸಲಾಯಿತು. ಪಿಡಿಒಗಳಾದ ಸಿ.ಎಚ್.ಮುದುಕಪ್ಪ, ಎನ್.ಬಸವರಾಜ, ವೀರಭದ್ರಪ್ಪ, ಬಿ.ಸರಸ್ವತಿ, ಪೂರ್ಣಿಮಾ, ಸಿದ್ದಮ್ಮ, ಈಶಪ್ಪ, ಜಲಾಲೆಪ್ಪ, ದೊಡ್ಡ ನಿಂಗಪ್ಪ, ಹುಚ್ಚಪ್ಪ, ಮಹಾಂತೇಶ ಇದ್ದರು.
ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ
ಸಿಂಧನೂರು ತಾಪಂ ಎಡಿ ವೆಂಕಪ್ಪಗೆ ಮನವಿ
ಸಿಂಧನೂರು: ವಿಬಿ ಜಿ ರಾಮ್ ಜಿ ಯೋಜನೆ ಬೇಡಿಕೆ ಆಧಾರಿತವಾಗಿದ್ದು, ಗುರಿ ಆಧಾರಿತ ಕಾರ್ಯಕ್ರಮವಲ್ಲ ಎಂಬುದನ್ನು ಸ್ಪಷ್ಟಪಡಿಸಿ ಸಮಗ್ರ ಕಾರ್ಯವಿಧಾನ ಸಂಹಿತೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಮಾರ್ಗಸೂಚಿ ಹೊರಡಿಸಲು ಒತ್ತಾಯಿಸಿ ರಾಜ್ಯ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ತಾಪಂ ಎಡಿ ವೆಂಕಪ್ಪ ಕುರುಕುಂದಗೆ ಮನವಿ ಸಲ್ಲಿಸಲಾಯಿತು.
ಗ್ರಾಮೀಣ ಕುಟುಂಬಗಳಿಂದ ವಾಸ್ತವವಾಗಿ ಸಲ್ಲಿಕೆಯಾಗುವ ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಮಾತ್ರ ಉದ್ಯೋಗ ಮತ್ತು ಕಾಮಗಾರಿ ಒದಗಿಸಬೇಕು. ಉದ್ಯೋಗ ಬೇಡಿಕೆಯೇ ಇಲ್ಲದ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕೃತಕವಾಗಿ ಮಾನವ ದಿನಗಳನ್ನು ಸೃಜಿಸುವ ಅಥವಾ ಬೇಡಿಕೆಯನ್ನು ಹೆಚ್ಚಿಸುವ ಒತ್ತಡ ಹೇರಬಾರದು. ಪ್ರತಿ ಗ್ರಾಪಂಗೆ ಪೂರ್ವನಿಗದಿತ ಮಾನವ ದಿನಗಳು, ಕಾಮಗಾರಿಗಳ ಸಂಖ್ಯೆ ಅಥವಾ ವೆಚ್ಚದ ಗುರಿ ನಿಗದಿಪಡಿಸುವುದನ್ನು ನಿಲ್ಲಿಸಬೇಕು. ಉದ್ಯೋಗ ಬೇಡಿಕೆ ಕೊರತೆಯಿಂದ ಮಾನವ ದಿನಗಳು ಸೃಜನೆಯಾಗದಿದ್ದಲ್ಲಿ ಅದನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ಲೋಪ ಎಂದು ಪರಿಗಣಿಸಬಾರದು. ರಾಜ್ಯಾದ್ಯಂತ ಅನ್ವಯವಾಗುವಂತೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಮಗ್ರ ಎಸ್‌ಒಪಿ ಮತ್ತು ಕಾರ್ಯಚರಣಾ ಕೈಪಿಡಿಯನ್ನು ತಕ್ಷಣ ಪ್ರಕಟಿಸಬೇಕು. 318 ಅನುಮತಿಸಬಹುದಾದ ಕಾಮಗಾರಿಗಳಿಗೆ ಮಾದರಿ ಅಂದಾಜು, ವಿನ್ಯಾಸ, ದರಪಟ್ಟಿ, ತಾಂತ್ರಿಕ ಟಿಪ್ಪಣಿಗಳನ್ನು ಒದಗಿಸುವುದು ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.