ರಕ್ತದಾನ ಮಾಡಿ ಜನರ ಅಮೂಲ್ಯ ಜೀವ ಉಳಿಸಿ

ಮಾನ್ವಿಯಲ್ಲಿ ಚೀಕಲಪರ್ವಿ ರುದ್ರಮುನೀಶ್ವರ ಮಠದ ಲಿಂ. ವಿರೂಪಾಕ್ಷ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಶಿಬಿರದಲ್ಲಿ ಶ್ರೀಮಠದ ಸದಾಶಿವ ಸ್ವಾಮೀಜಿ ರಕ್ತದಾನ ಮಾಡಿದರು. ಪ್ರಮುಖರಾದ ವೀರೇಶ ಎನ್.ಹೊಸೂರು, ಅರುಣಕುಮಾರ ಚಂದ, ಚಂದ್ರಮೌಳೇಶ್ವರ ಬೆಟ್ಟದೂರು ಇತರರಿದ್ದರು.

Published on
ಮಾನ್ವಿ: ಅಮೂಲ್ಯ ಜೀವಗಳನ್ನು ಉಳಿಸಲು ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕಿದೆ ಎಂದು ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಶ್ರೀಗಳು ಹೇಳಿದರು.
ಚೀಕಲಪರ್ವಿ ರುದ್ರಮುನೀಶ್ವರ ಮಠದ ಲಿಂ.ವಿರೂಪಾಕ್ಷ ಶ್ರೀಗಳ 12ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಪಟ್ಟಣದ ಕಳಿಂಗ ಪಿಯು ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಸಾರ್ಥಕ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ, ಹೃದಯಾಘಾತ ಸೇರಿದಂತೆ ಇತರ ಕಾಯಿಲೆಗಳಿಂದ ದೂರ ಇರಬಹುದು ಎಂದು ಹೇಳಿದರು. ಸ್ವಾಮೀಜಿ, ಶ್ರೀಮಠದ ಭಕ್ತರು ಸೇರಿ 120ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮರಡ್ಡಿ ಭೋಗಾವತಿ, ತಾಲೂಕು ವೈದ್ಯಾಧಿಕಾರಿ ಶರಣಬಸವ ಗೌಡ, ಚೀಕಲಪರ್ವಿ ಅಯುಷ್ ವೈದ್ಯಾಲಯದ ಡಾ.ರಾಜೇಂದ್ರ ಕುಮಾರ, ರಿಮ್ಸ್ ರಕ್ತ ಭಂಡರದ ಡಾ. ಹೈಮದ್ ಹುಸೇನ್, ಕಳಿಂಗ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮನೋಜ್‌ಕುಮಾರ ಮಿಶ್ರಾ, ವೀರಶೈವ ಲಿಂಗಾಯತ ಸಂಘಟನೆ ಅಧ್ಯಕ್ಷ ಹರಹರ ಪಾಟೀಲ್, ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ ಅರುಣಕುಮಾರ ಚಂದ, ಬಿ.ವಿ. ರಡ್ಡಿ, ವೀರೇಶ ಎನ್.ಹೊಸೂರು, ಚಂದ್ರಮೌಳೇಶ್ವರ ಬೆಟ್ಟದೂರು, ಚಂದ್ರಪ್ಪಗೌಡ ಚೀಕಲಪರ್ವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net