

ಮಾನ್ವಿ: ಉತ್ತಮ ಆರೋಗ್ಯಕ್ಕಾಗಿ ದುಶ್ಚಟಗಳಿಂದ ದೂರವಿರಬೇಕು ಹಾಗೂ ನಿತ್ಯ ಯೋಗ ಮಾಡಬೇಕೆಂದು ಯೋಗ ಗುರು ಅನ್ನದಾನಯ್ಯಸ್ವಾಮಿ ಸಲಹೆ ನೀಡಿದರು.
ಕಪಗಲ್ ಗ್ರಾಮದಲ್ಲಿ ನಶೆಮುಕ್ತ ಭಾರತ ನಿರ್ಮಾಣಕ್ಕಾಗಿ ಒಂದು ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕು, ಮದ್ಯ ಸೇವನೆ ಮಾಡಬಾರದು. ನಿತ್ಯ ಸ್ವಲ್ಪ ಸಮಯ ಯೋಗ, ಧ್ಯಾನ, ಪ್ರಾಣಾಯಾಮ ಮಾಡಬೇಕು. ಆ.25ರವರೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಚಿತವಾಗಿ ಯೋಗಾಭ್ಯಾಸ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.