

ಕವಿತಾಳ: ಸರ್ಕಾರದ ಸವಲತ್ತು ಪಡೆಯಲು ಪ್ರತಿಯೊಬ್ಬರೂ ಮತದಾನದ ಅರ್ಹತೆ ಪಡೆಯಬೇಕು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.
ಬಾಗಲವಾಡದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪರಿಶೀಲಿಸಿ ಬಿಲ್‌ಒಗಳಿಂದ ಮಾಹಿತಿ ಪಡೆದರು. ಬಳಿಕ ಗ್ರಾಮದ ಪ್ರಮುಖರೊಂದಿಗೆ ಚರ್ಚಿಸಿ, ಯಾರೂ ಮತದಾರರ ಪಟ್ಟಿಯಿಂದ ವಂಚಿತರಾಗಬಾರದು. ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಕವಾಲಿ, ಮುಖ್ಯಶಿಕ್ಷಕ ಗಿರೀಶಸ್ವಾಮಿ, ಮಲ್ಲನಗೌಡ ಪೊಪಾ., ಅಮರೇಶ ನಾಯಕ, ನಾಗರಾಜ ಹಿಂದಿನಮನೆ ಉಪಸ್ಥಿತರಿದ್ದರು.