ಶಾಲೆ ಆವರಣದಲ್ಲಿ ಹಾಸ್ಟೆಲ್ ನಿರ್ಮಿಸದಿರಿ

ಸಿರವಾರ ತಹಸಿಲ್ ಕಚೇರಿಯ ಶಿರಸ್ತೇದಾರ್ ಜುಬೇರ್‌ಗೆ ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳು ಮನವಿ ಸಲ್ಲಿಸಿದರು. ಪಪಂ ಸದಸ್ಯ ಅಜಿತ್ ಕುಮಾರ ಹೊನ್ನಟಗಿ, ಶಿಕ್ಷಣ ಪ್ರೇಮಿಗಳಾದ ಅಯ್ಯಣ್ಣ ಏರೆಡ್ಡಿ, ಟಿ.ಬಸವರಾಜ, ಅಮರೇಶಗೌಡ ನಂದರೆಡ್ಡಿ, ವಿದ್ಯಾರಾಜ, ಕೃಷ್ಣ. ಪಿ, ಅಪ್ಪಾಜಿ ನಾಯಕ, ಚನ್ನಪ್ಪ ಬೂದಿನಾಳ, ಎಸ್. ಮಲ್ಲಿಕಾರ್ಜುನ್, ಹನುಮಂತ ಇದ್ದರು.

Published on
ಸಿರವಾರ: ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಬೇರೆಡೆ ಸ್ಥಳಾಂತರಿಸಬೇಕೆಮದು ಆಗ್ರಹಿಸಿ ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳು ಪಟ್ಟಣದ ತಹಸಿಲ್ ಕಚೇರಿಯ ಶಿರಸ್ತೇದಾರ್ ಜುಬೇರ್‌ಗೆ ಗುರುವಾರ ಮನವಿ ಸಲ್ಲಿಸಿದರು.
ವಸತಿ ನಿಲಯ ನಿರ್ಮಾಣದಿಂದ ಶಾಲೆ ಮತ್ತು ಕಾಲೇಜಿಗೆ ಮೈದಾನ ಇಲ್ಲದಂತಾಗಲಿದೆ. ಇದರಿಂದ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಲ್ಲದೆ ದೈಹಿಕ-ಮಾನಸಿಕ ಆರೋಗ್ಯ ಕುಂಠಿತವಾಗಲಿದೆ. ಶಾಲೆಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ತೊಂದರೆಯಾಗಲಿದೆ. ವಿಜ್ಞಾನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ತೊಂದರೆ ಆಗಲಿದೆ. ಆದ್ದರಿಂದ ಬಿಸಿಎಂ ವಸತಿ ನಿಲಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net