ಜಿಲ್ಲಾ ಪ್ರಥಮ ಕದಳಿ ಮಹಿಳಾ ಸಮ್ಮೇಳನ -ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಿ
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ವತಿಯಿಂದ ಕದಳಿ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾ ಪ್ರಥಮ ಕದಳಿ ಮಹಿಳಾ ಸಮ್ಮೇಳನವನ್ನು ಸಹ ಪ್ರಾಧ್ಯಾಪಕಿ ಡಾ.ಎ.ಎಸ್.ಆಶಾದೇವಿ ಉದ್ಘಾಟಿಸಿದರು. ಕದಳಿ ವೇದಿಕೆ ರಾಜ್ಯ ಸಂಚಾಲಕಿ ಸುಶೀಲ ಸೋಮಶೇಖರ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಲಲಿತಾ ಬಸನಗೌಡ, ಹೆಚ್.ಬಿ ಹಂಪಣ್ಣ, ನಾಗರಾಜ ಮಸ್ಕಿ, ದಾನಮ್ಮ ಸುಭಾಚ್ ಚಂದ್ರ, ಸುಮಂಗಲಾ ಸಕ್ರಿ, ಸದನಮ್ಮ ಗುಂಡಪ್ಪ, ಸುಮಂಗಲಾ ಸೂಗುರಯ್ಯ ಹಿರೇಮಠ ಇದ್ದರು.
Published on:
Copied
Follow Us
ರಾಯಚೂರು
ನಮಗೆ ವಚನಗಳ ಭಯವಿದೆ, ಶರಣ ಶರಣೆಯರ ವಚನಗಳ ಬಗ್ಗೆ ಮಾತನಾಡುವಾಗ ಅವರ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಸಿಡಿಸಿಕೊಂಡಿದ್ದೀವಾ, ಅಕ್ಕ ಮಹಾದೇವಿ, ನೀಲಮ್ಮ ಅವರು ಸಮ ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎನ್ನುವ ಕನಸ್ಸು ಅವರದ್ದಾಗಿದೆಂದು ಸಹ ಪ್ರಾಧ್ಯಾಪಕಿ ಡಾ.ಎ.ಎಸ್.ಆಶಾದೇವಿ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪ್ರಥಮ ಕದಳಿ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕಿನಲ್ಲಿ ಸಾಕಷ್ಟು ಕಷ್ಟ ನೋವುಗಳನ್ನು ಅನುಭವಿಸಿದ್ದರು, ಆದರೆ ಅವರು ಮಹಿಳೆಯರಿಗೆ ಸಮಾಜದಲ್ಲಿ ಗಂಡಿನಷ್ಟೆ ಸಮನಾಗಿರಬೇಕು ಎನ್ನುವ ಆಶಯವಾಗಿತ್ತು. ಮಹಿಳೆಯರು ಸಂಸಾರ, ದಾಂಪತ್ಯ, ಕುಟುಂಬಕ್ಕಾಗಿ ಎಲ್ಲವನ್ನು ಧಾರೆ ಎರೆಯುತ್ತಿದ್ದು, ಆದರೆ ಅವರಿಗೆ ಸಿಗಬೇಕಾದ ಗೌರವ ಇಂದು ಸಿಗುತ್ತಿಲ್ಲ, ಮಹಿಳೆಯರು ಗಂಡಸರ ವಿರೋಧಿ ಅಲ್ಲ, ಆದರೆ ಮಹಿಳೆಯರನ್ನು ತಮ್ಮಿಷ್ಟದಂತೆ ಸಮಾಜ ನಡೆಸಿಕೊಳ್ಳುವುದು ಮಹಿಳಾ ವಿರೋಧಿಯಾಗಿದೆ.
ಮಹಿಳೆಯರು ಮೇಲೆ ಸಾಕಷ್ಟು ಹಲ್ಲೆ, ಕೊಲೆ ಸೇರಿದಂತೆ ರೀತಿಯಲ್ಲಿ ಶೋಷಣೆ ಮಾಡುತ್ತಿದ್ದೇವೆ, ಸರ್ಕಾರ ನಿರ್ಭಯ ಕಾನೂನು ತಂದಿದೆ ಎಂದು ಹೇಳುತ್ತಿದೆ ಆದರೆ ವ್ಯವಸ್ಥೆ ಮಾತ್ರ ಹಾಗೆಯೇ ಇದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಮ ಸಮಾಜದಲ್ಲಿ ಮಹಿಳೆಯರಿಗೆ ದೊರಕುವ ಗೌರವ ಸಿಗುವಂತಾಗಬೇಕಾಗಿದೆ, ಇದು ನಮ್ಮ ಕದಳಿ ವೇದಿಕೆ ಉದ್ದೇಶವಾಗಿದೆ ಎಂದರು.
ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಗಂಗಮ್ಮ ಸತ್ಯಂಪೇಟೆ ಅವರ ಮೆರವಣಿಗೆ ನಡೆಯಿತು. ನಗರದ ಬಸವೇಶ್ವರ ವೃತ್ತದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಗೆ ಮಹಾ ನಗರ ಪಾಲಿಕೆ ಆಡಳಿತಾಧಿಕಾರಿ ಸಂತೋಷ ರಾಣಿ ಅವರು ಚಾಲನೆ ನೀಡಿದರು. ಮೆರವಣಿಗೆ ಬಸವೇಶ್ವರ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತದ ಮೂಲಕ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ತಲುಪಿತು.
ಈ ಸಂದರ್ಭದಲ್ಲಿ ಕದಳಿ ವೇದಿಕೆ ರಾಜ್ಯ ಸಂಚಾಲಕಿ ಸುಶೀಲ ಸೋಮಶೇಖರ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಲಲಿತಾ ಬಸನಗೌಡ, ಹೆಚ್.ಬಿ ಹಂಪಣ್ಣ, ನಾಗರಾಜ ಮಸ್ಕಿ, ದಾನಮ್ಮ ಸುಭಾಚ್ ಚಂದ್ರ, ಸುಮಂಗಲಾ ಸಕ್ರಿ, ಸದನಮ್ಮ ಗುಂಡಪ್ಪ, ಸುಮಂಗಲಾ ಸೂಗುರಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.