ಅಖಿಲಾಂಡ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹಾಗೂ ಕಲ್ಯಾಣ ಕರ್ನಾಟಕ ಜಿಲ್ಲಾ ಘಟಕದಿಂದ ಆ.9 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿಚಾರ ಸಂಕಿರಣ ಆಯೋಜಿಸಲಾಗಿದೆಂದು ಸಂಘದ ಅಧ್ಯಕ್ಷ ವೆಂಕಟೇಶ ನಾಯಕ ಅಸ್ಕಿಹಾಳ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು, ಗೊಲ್ಲಪಲ್ಲಿ ವಾಲ್ಮೀಕಿ ಆಶ್ರಮದ ಶ್ರೀವರದಾನೇಶ್ವರ ಸ್ವಾಮೀಜಿ, ಕರ್ನೂಲ್ ಜಿಲ್ಲೆಯ ತಾಡೋನ್ ವಾಲ್ಮೀಕಿ ಮಠದ ಶ್ರೀ ಅಂಜಿ ಸ್ವಾಮೀಜಿ, ಗಾರಲದಿನ್ನಿ ಶಿವಾನಂದ ಮಠದ ಮೌನೇಶ ಮಹಾರಾಜರು ವಹಿಸಲಿದ್ದಾರೆ.
ಗ್ರಾಮೀಣ ಶಾಸಕ ಬಸನಗೌಡ ದ್ದದಲ್ ಉದ್ಘಾಟಿಸಲಿದ್ದಾರೆ. ಸಂಸದ ಜಿ.ಕುಮಾರನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಸಚಿವ ಎನ್.ಎಸ್.ಬೋಸರಾಜ, ಆರ್.ಬಸನಗೌಡ ತುರ್ವಿಹಾಳ, ಹಂಪನಗೌಡ ಬಾದರ್ಲಿ, ಜಿ.ಹಂಪಯ್ಯನಾಯಕ, ಗುಂತಕಲ್ ಶಾಸಕ ಗುಮನೂರು ಜಯರಾಮನಾಯಕ, ಜಿ.ಕರೆಮ್ಮ ನಾಯಕ, ಮಾನಪ್ಪ ವಜ್ಜಲ್, ಎ.ವಸಂತಕುಮಾರ ಆಗಮಿಸಲಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅರ್ಜಿ ಹಾಕದೇ ಇರುವ ವಿದ್ಯಾರ್ಥಿಗಳು ಜಾತಿಪ್ರಮಾಣ ಪತ್ರ, ಅಂಕಪಟ್ಟಿಯೊಂದಿಗೆ ನೇರವಾಗಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ ನಾಯಕ ವಕೀಲ, ನಾಗೇಂದ್ರ ನಾಯಕ, ನರಸರೆಡ್ಡಿ, ನರಸಿಂಹ ನಾಯಕ ಬೀಜನಗೇರ, ನರಸಿಂಹ ನಾಯಕ, ಗೀರೀಶ ನಾಯಕ, ನರಸಿಂಹ ನಾಯಕ ಇದ್ದರು.