ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಚಾಲನೆ ನೀಡಿದರು. ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟ್ ಸಿಂಗ್, ಶಾಸಕ ಜಿ.ಹಂಪಯ್ಯ ನಾಯಕ, ಎಸ್ಪಿ ಅರುಣಾಂಗ್ಷು ಗಿರಿ,ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ್ ,,ಕಾನಿಪದ  ರಾಜ್ಯ ಕಾರ್ಯದರ್ಶಿ ಸೋಮಶೇಖರ ಕರೆಗೂಡು, ರಾಜ್ಯ ಸಮಿತಿಯ ಸದಸ್ಯರಾದ ಅರವಿಂದ್ ಕುಲಕರ್ಣಿ, ಬಸವರಾಜ ನಾಗಡದಿನ್ನಿ,  ಸಂಘದ ಅಧ್ಯಕ್ಷ ಆರ್.ಗುರುನಾಥ ಹಾಗೂ ಗಿಲ್ಡ್ ಅಧ್ಯಕ್ಷ ವಿಜಯ ಕುಮಾರ ಜಾಗಟಗಲ್ ಇದ್ದರು.
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಚಾಲನೆ ನೀಡಿದರು. ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟ್ ಸಿಂಗ್, ಶಾಸಕ ಜಿ.ಹಂಪಯ್ಯ ನಾಯಕ, ಎಸ್ಪಿ ಅರುಣಾಂಗ್ಷು ಗಿರಿ,ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ್ ,,ಕಾನಿಪದ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕರೆಗೂಡು, ರಾಜ್ಯ ಸಮಿತಿಯ ಸದಸ್ಯರಾದ ಅರವಿಂದ್ ಕುಲಕರ್ಣಿ, ಬಸವರಾಜ ನಾಗಡದಿನ್ನಿ, ಸಂಘದ ಅಧ್ಯಕ್ಷ ಆರ್.ಗುರುನಾಥ ಹಾಗೂ ಗಿಲ್ಡ್ ಅಧ್ಯಕ್ಷ ವಿಜಯ ಕುಮಾರ ಜಾಗಟಗಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪತ್ರಕರ್ತರು ಸಮಾಜ್ದ ಸಮಸ್ಯೆಗಳನ್ನು ಬೆಳಕಿಗೆವ ತರಬೇಕು
  • ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿಕೆ
ರಾಯಚೂರು ಪತ್ರಿಕೋದ್ಯಮವು ಕೇವಲ ಹೇಳಿಕೆ ಆಧಾರಿತ ಸುದ್ದಿಗಳಿಗೆ ಸೀಮಿತವಾಗದೆ, ಸಮಾಜದ ಸಮಸ್ಯೆಗಳನ್ನು ಹುಡುಕಿ ಬೆಳಕಿಗೆ ತರುವ ಸಮಾಜಮುಖಿ ಕಾರ್ಯವಾಗಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ , ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಸಂದರ್ಭದಲ್ಲಿ ಪತ್ರಕರ್ತರ ವೃತ್ತಿಗೆ ಹಲವು ಸವಾಲುಗಳು, ತೊಡಕುಗಳು ಹಾಗೂ ಆತಂಕಗಳು ಎದುರಾಗುತ್ತಿದ್ದು, ಅವುಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ. ಪತ್ರಕರ್ತ ಎಂಬ ಗುರುತು ಒಂದು ಹುದ್ದೆ ಯಲ್ಲ, ಅದು ಜವಾಬ್ದಾರಿ ಮತ್ತು ದೀಕ್ಷೆ. ಆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಸುದ್ದಿಮನೆಗೆ ಗೌರವ, ವೃತ್ತಿಗೆ ಘನತೆ ಹಾಗೂ ಪತ್ರಕರ್ತನ ವ್ಯಕ್ತಿತ್ವಕ್ಕೂ ಮೌಲ್ಯ ಹೆಚ್ಚುತ್ತದೆ ಎಂದು ಹೇಳಿದರು.
ಸುದ್ದಿಮನೆಗಳಿಗೆ ಬ್ಲ್ಯಾಕ್‌ಮೇಲ್ ಮಾಡುವವರು, ಅಪರಾಧ ಪ್ರವೃತ್ತಿಯವರು ಅಥವಾ ಸುಳ್ಳು ಸುದ್ದಿಗಳನ್ನು ಹರಡುವವರ ಅಗತ್ಯವಿಲ್ಲ. ಸಮಾಜದ ನೋವಿಗೆ ಸ್ಪಂದಿಸುವ, ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಮತ್ತು ಅಭಿವೃದ್ಧಿಗೆ ಕನ್ನಡಿ ಹಿಡಿಯುವ ಪತ್ರಕರ್ತರ ಅಗತ್ಯವಿದೆ ಎಂದು ಅವರು ತಿಳಿಸಿದರು.
ಒಬ್ಬ ಪತ್ರಕರ್ತನ ವರದಿಯಿಂದ ಬಡವರಿಗೆ ಮನೆ ದೊರೆತರೆ, ಗ್ರಾಮಕ್ಕೆ ರಸ್ತೆ ನಿರ್ಮಾಣವಾದರೆ ಅಥವಾ ಆಡಳಿತದ ಗಮನ ಸಮಸ್ಯೆಗಳತ್ತ ಸೆಳೆಯಲು ಸಾಧ್ಯವಾದರೆ, ಅದೇ ನಿಜವಾದ ಪತ್ರಿಕೋದ್ಯಮದ ಸಾರ್ಥಕತೆ ಎಂದು ಅಭಿಪ್ರಾಯಪಟ್ಟರು. ಇಂದು ಪತ್ರಿಕೋದ್ಯಮ ಹೇಳಿಕೆಗಳ ಆಧಾರದ ಮೇಲೆ ಸಾಗುತ್ತಿರುವುದು ಕಳವಳಕಾರಿ. ನೈಜ ಸಮಸ್ಯೆಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಜನಪರ ವರದಿಗಳನ್ನು ಪ್ರಕಟಿಸುವ ಮನೋಭಾವ ಪತ್ರಕರ್ತರಲ್ಲಿ ಬೆಳೆಯಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಪರ್ತಕರ್ತರು ಸಮಾಜದ ಬಗ್ಗೆ ಪ್ರಾಮಾಣಿಕ ಕಳಕಳಿ ಹೊಂದಿದಲ್ಲಿ ಮಾತ್ರ. ಪತ್ರಕರ್ತರ ವೃತ್ತಿಗೆ ಗೌರವ ದೊರೆಯಲಿದೆ. ಸಮಾಜದಲ್ಲಿನ ನ್ಯೂನತೆಯನ್ನು ತಿದ್ದಲು ಸುದ್ದಿ ಮಾಧ್ಯಮ ಪ್ರಬಲ ಅಸ್ತ್ರವಾಗಿದ್ದು, ಸಮಾಜದ ಬಗ್ಗೆ ಕಳಕಳಿ ಇಲ್ಲದ ಪರ್ತಕರ್ತರ ವೃತ್ತಿಗೆ ಜನಮನ್ನಣೆ ದೊರೆಯಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಡಿ.ವಿ ಗುಂಡಪ್ಪ ಮತ್ತಿತರ ಹೋರಾಟಗಾರರು ಪತ್ರಿಕೆಯನ್ನು ಸಮಾಜಕ್ಕೆ ಪೂರಕವಾಗಿ ಬಳಸಿಕೊಂಡು ಪತ್ರಿಕಾ ಕ್ಷೇತ್ರದ ಮೌಲ್ಯ ಹೆಚ್ಚಿಸಿದ್ದಾರೆ ಎಂದರು.
ಸಮಾಜದಲ್ಲಿ ಪತ್ರಿಕೋದ್ಯಮ ಕ್ಷೇತ್ರಾ ಅತ್ಯಂತ ಉತ್ತಮ ಸ್ಥಾನಮಾನ ಹೊಂದಿದೆ. ರಾಯಚೂರಿನಲ್ಲಿ ಮೊದಲು ರಾಯಚೂರು ವಾಣಿ ಪತ್ರಿಕೆಯನ್ನು ಎನ್.ಕೆ.ಕುಲಕರ್ಣಿ ಅವರು ಸ್ಥಾಪಿಸಿ, ಇಲ್ಲಿನ ಕುಂದುಕೊರತೆಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಪ್ರಸ್ತುತ ದಿನದಲ್ಲಿ ಪತ್ರಿಕೋದ್ಯಮ ಕ್ಷೇತ್ರವು ವಿಸ್ತರಣೆಯಾಗಿದೆ. ಪತ್ರಕರ್ತರು ಯಾರನ್ನು ವೈಯುಕ್ತಿಕ ತೇಜೋವದೆ ಮಾಡಬಾರದು. ಈ ಭಾಗದ ಸಮಸ್ಯೆಗಳನ್ನು ಬಗ್ಗೆಹರಿಸಲು ಪತ್ರಕರ್ತರು ನಮಗೆ ಮಾರ್ಗದರ್ಶಕರು ಆಗಿದ್ದಾರೆ. ರಾಯಚೂರಿನಲ್ಲಿ ಬರುವ ದಿನಗಳಲ್ಲಿ ನಡೆಯುವ ರಾಜ್ಯ ಮಟ್ಟದ ಸಮ್ಮೇಳನದ ಯಶಸ್ವಿಗೆ ನಾವೆಲ್ಲ ಕೂಡಿ ಶ್ರಮಿಸೋಣ. ಪತ್ರಕರ್ತರ ಸಮಸ್ಯೆಗಳನ್ನು ಹಂತಹಅತವಾಗಿ ಸರ್ಕಾರದ ಮಟ್ಟದಲ್ಲಿ ಬಗೆ ಹರಿಸಲಾಗುವುದು. ಈ ಭಾಗವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಪತ್ರಿಕೋದ್ಯಮ ಕ್ಷೇತ್ರವು ಅತ್ಯವಶ್ಯವಾಗಿದೆ. ಪತ್ರಕರ್ತರ ಸಂಘದಿಅದ ಮಾಡುವ ಕೆಲಸ ಕಾರ್ಯಗಳಿಗೆ ನಾವು ಬೆಂಬಲವಾಗಿ ನಿಲ್ಲುವುದಾಗಿ ಹೇಳಿದರು.
ಪ್ರಸ್ತಾವಿಕವಾಗಿ ಸಂಘದ ಅಧ್ಯಕ್ಷ ಆರ್.ಗುರುನಾಥ ಹಾಗೂ ಗಿಲ್ಡ್ ಅಧ್ಯಕ್ಷ ವಿಜಯ ಕುಮಾರ ಜಾಗಟಗಲ್ ಮಾತನಾಡಿದರು.
ನಂತರ ಮಸ್ಕಿ ವಿಜಯವಾಣಿ ವರದಿಗಾರ ವಿರೇಶ ಸೌದ್ರಿ ಅವರಿಗೆ ಮಲ್ಲಿಕಾರ್ಜುನ ಪಾಟೀಲ್ ಪ್ರಾಯೋಜಿತ ದಿ. ಶ್ರೀ ಶಿವಶಂಕರಗೌಡ ಪಾಟೀಲ್ ಯದ್ಧಲದಿನ್ನಿ ಸ್ಮರಣಾರ್ಥ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ ಸೇರಿ ಮೂರು ಜನರಿಗೆ ವಿಶೇಷ ಪ್ರಶಸ್ತಿ ಹಾಗೂ ಅನೇಕರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟ್ ಸಿಂಗ್, ಶಾಸಕ ಜಿ.ಹಂಪಯ್ಯ ನಾಯಕ, ಎಸ್ಪಿ ಅರುಣಾಂಗ್ಷು ಗಿರಿ,ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ್ ,,ಕಾನಿಪದ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕರೆಗೂಡು, ರಾಜ್ಯ ಸಮಿತಿಯ ಸದಸ್ಯರಾದ ಅರವಿಂದ್ ಕುಲಕರ್ಣಿ, ಬಸವರಾಜ ನಾಗಡದಿನ್ನಿ, ಜಿಲ್ಲಾ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ, ಕಲಬುರಗಿ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net