ರಾಯಚೂರು ಆರ್ಟ್ ಅಫ್ ಲಿವಿಂಗ್ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಒಂದು ವಾರ ಹಮ್ಮಿಕೊಂಡ ಸುದರ್ಶನ ಕ್ರಿಯಾ ಕಾರ್ಯಕ್ರಮವು ಭಾನುವಾರ ಸಮಾರೋಪಗೊಂಡಿತು.
ಕಾರ್ಯಕ್ರನದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಅನಿತಾ ಹಿರೇಮನಿ ಮಾತನಾಡಿ, ವಿಚಾರಣಾಧೀನ ಬಂಧಿ ನಿವಾಸಿಗಳ ಮಾನಸಿಕ ಆರೋಗ್ಯ ಮತ್ತು ಉಸಿರಾಟ ತಂತ್ರಗಳ ಮೇಲೆ ಕೇಂದ್ರೀಕರಿಸಿ ಒತ್ತಡ ಕಡಿಮೆ ಮಾಡುವುದು. ಭಾವನಾತ್ಮಕ ಸಮತೋಲನವನ್ನು ಹೆಚ್ಚಿಸುವುದು. ಆಂತರಿಕ ಶಾಂತಿಯನ್ನು ಉತ್ತೇಜಿಸುವುದು, ನಿದ್ರೆಯ ಗುಣಮಟ್ಟದಲ್ಲಿ ಸುಧಾರಣೆ, ಮನಶಾಂತಿ ಹೊಂದುವುದು ಸೇರಿ ವಿವಿಧ ವಿಚಾರಗಳನ್ನು ತಿಳಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಜೈಲರ್‌ಗಳಾದ ಈರಯ್ಯ ಹಿರೇಮಠ, ವೆಂಕಟೇಶ್ ನಾಯಕ, ಆರ್ಟ್ ಆಫ್ ಲಿವಿಂಗ್ ಕಾರ್ಯಕರ್ತರಾದ ರಮೇಶ್ ಜೈನ್,ಕಿಶೋರ್ ಕೊಂಡ, ಸರಸ್ವತಿ ಕಿಲಕಿಲೆ, ಶ್ರೀನಿವಾಸ ಸಾಗರ್ ,ಚಂದ್ರ ಶೇಖರ ಸೇರಿ ಅನೇಕರು ಇದ್ದರು.