ಡಿಸಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

ರಾಯಚೂರಿ ಜಿಲ್ಲಾಧಿಕಾರಿಗಳ ಭವನದಲ್ಲಿ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ನಿತೀಶ್ ಕೆ., ಅಧ್ಯಕ್ಷತೆಯಲ್ಲಿ  ಮುಂಬರುವ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಪಂ ಸಿಇಒ ಈಶ್ವರ ಕುಮಾರ ಕಾಂದೊ, ಎಡಿಸಿ ಶಿವಾನಂದ ಭಜಂತ್ರಿ ಇದ್ದರು.
ರಾಯಚೂರಿ ಜಿಲ್ಲಾಧಿಕಾರಿಗಳ ಭವನದಲ್ಲಿ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ನಿತೀಶ್ ಕೆ., ಅಧ್ಯಕ್ಷತೆಯಲ್ಲಿ ಮುಂಬರುವ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಪಂ ಸಿಇಒ ಈಶ್ವರ ಕುಮಾರ ಕಾಂದೊ, ಎಡಿಸಿ ಶಿವಾನಂದ ಭಜಂತ್ರಿ ಇದ್ದರು.
Published on
ರಾಯಚೂರು ಮುಂಬರಲಿರುವ ಏಪ್ರೀಲ್ ಮೊದಲ ವಾರದಲ್ಲಿ ಜಿಲ್ಲೆಯ ಎಲ್ಲೆ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮೊದಲಾದ್ಯತೆ ನೀಡಬೇಕೆಂದು ನಿತೀಶ್.ಕೆ ಹೇಳಿದರು.
ಜಿಲ್ಲೆಯಲ್ಲಿ ಮುಂಬರುವ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ,ಆಲಿಕಲ್ ಮಳೆಯಿಂದಾದ ಬೆಳೆಹಾನಿ ಹಾಗೂ ಮೇವು ಲಭ್ಯತೆ ಕುರಿತು ಜಿಲ್ಲಾಧಿಕಾರಿಗಳ ಭವನದಲ್ಲಿ ಮಂಗಳವಾರ ಸಂಜೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಿಂಧನೂರ ತಾಲೂಕಿನಲ್ಲಿ ಅತೀ ಹೆಚ್ಚು 155 ಕೆರೆಗಳಿದ್ದು ಈ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು. ಇನ್ನುಳಿದಂತೆ ರಾಯಚೂರು ತಾಲೂಕಿನಲ್ಲಿ 15, ಮಾನ್ವಿ ತಾಲೂಕಿನಲ್ಲಿ 18, ಅರಕೇರಾ ತಾಲೂಕಿನಲ್ಲಿ 13, ಮಸ್ಕಿ ತಾಲೂಕಿನಲ್ಲಿ 24, ಸಿರವಾರ ತಾಲೂಕಿನಲ್ಲಿ 43 ಹಾಗೂ ಲಿಂಗಸೂರ ತಾಲೂಕಿನಲ್ಲಿ 2 ಕೆರೆಗಳಿದ್ದು ಈ ಎಲ್ಲ ಕೆರೆಗಳನ್ನು ಮುಂದಿನ ತಿಂಗಳು ಜಾಗ್ರತೆಯಿಂದ ತುಂಬಿಸಬೇಕು. ಮಳೆಗಾಲದವರೆಗೆ ಮುಂದೆ ನೀರು ಸಿಗುವುದಿಲ್ಲ ಎಂದು ತಿಳಿಸಿದರು.
ಆಯಾ ತಾಲೂಕಿನ ತಹಸೀಲ್ದಾರರು, ಕಾರ್ಯ ನಿರ್ವಾಹಕ ಅಧಿಕಾರಿಗಳು ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಒಗ್ಗೂಡಿ ಅತ್ಯಂತ ಕಾಳಜಿಯಿಂದ ಕೆರೆಗಳನ್ನು ತುಂಬಿಸಬೇಕು. ಈಗೊಂದು ವೇಳೆ ಕೆರೆ ತುಂಬಿಸದಿದ್ದಲ್ಲಿ ಜನತೆಗೆ ತೊಂದರೆಯಾಗಲಿದೆ. ಮುಂದಿನ ಜುಲೈವರೆಗೆ ಮತ್ತೆ ನೀರು ಸಿಗುವುದಿಲ್ಲ. ಏಪ್ರೀಲ್, ಮೇ ಮತ್ತು ಜೂನ್ ತಿಂಗಳವರೆಗೆ ಯಾವುದೇ ರೀತಿಯಲ್ಲಿ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದ ಹಾಗೆ ವ್ಯವಸ್ಥೆಯಾಗಬೇಕು.
ಬರುವ ಏಪ್ರೀಲ್ ಮೊದಲನೇ ವಾರದಲ್ಲಿ ನೀರು ಹರಿಸಲಾಗುವುದು. ಈ ವೇಳೆ ಕೆರೆಗೆ ನೀರು ತುಂಬಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಯಾವುದಾದರು ಗ್ರಾಮಸ್ಥರಿಗೆ ತೊಂದರೆಯಾದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕೆರೆಗಳಿಗೆ ನೀರು ತುಂಬಿಸದೇ ಬೇಜವಾಬ್ದಾರಿ ವಹಿಸಿರುವುದು ಗೊತ್ತಾದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯನುಸಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಹಾಯಕ ಆಯುಕ್ತರು, ಎಲ್ಲ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು,
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಇನ್ನೀತರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ ಮಾತನಾಡಿ, ಸಮಸ್ಯಾತ್ಮಕ ಹಳ್ಳಿಗಳಲ್ಲಿ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಬೇಕು. ರಾಯಚೂರು ಮತ್ತು ಸಿಂಧನೂರ ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಜಿಲ್ಲಾ ವ್ಯಾಪ್ತಿಯ ಎಲ್ಲ ಹಳ್ಳಗಳಲ್ಲಿ ಪರೀಕ್ಷಿಸಿದ ಬಳಿಕವೇ ಕುಡಿಯುವ ನೀರು ಪೂರೈಸಬೇಕು.
ಕುಡಿಯುವ ನೀರಿನ ಪರೀಕ್ಷೆಯನ್ನು ನಿಯಮಿತವಾಗಿ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು. ದೇವದುರ್ಗ, ಸಿರವಾರ ಮತ್ತು ಮಾನ್ವಿಗಳಲ್ಲಿ ಟಾಸ್ಕಪೋರ್ಸ್ ಸಭೆಗೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಡಿಸಿ ಶಿವಾನಂದ ಭಜಂತ್ರಿ, ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಸೇರಿ ವಿವಿಧ ತಾಲೂಕು ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net