ಜಿಲ್ಲಾಡಳಿತದಿಂದ ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆ

ರಾಯಚೂರಿನ ಸುಮತಿನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಆರಾಧನಾ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಎಸಿ ಡಾ.ಹಂಪಣ್ಣ ಸಜ್ಜನ ಚಾಲನೆ ನೀಡಿದರು. ಎಎಸ್ಪಿ ಕುಮಾರ ಸ್ವಾಮಿ, ತಹಶೀಲ್ದಾರ್ ಸುರೇಶ ವರ್ಮ,  ಮಹಾನಗರ ಪಾಲಿಕೆ ಸದಸ್ಯ ಕಾರ್ಯದರ್ಶಿ ಕೃಷ್ಣಾ ಶಾವಂತಗೇರಾ, ಸಮಾಜದ ಪ್ರಮುಖರಾದ ಪ್ರಕಾಶ, ಕಿಶೋರ್, ಮಹಾವೀರ ಹರದರ, ಪ್ರಖರಾಜ, ಅಶ್ವಿನ ಭಾಟಿಯಾ, ಮೋಹನಲಾಲ್, ರಂಜಿತ್ ಕಟಾರಿಯಾ, ರಾಜುಭಾಯಿ ದೇಸಾಯಿ, ಮನ್ನೂಬಾಯಿ, ಅಶೀಕ ಲೋಧಾ ಇದ್ದರು.

Published on
ರಾಯಚೂರು ಭಗವಾನ್ ಮಹಾವೀರರು ತಮ್ಮ ಜೀವಿತಾವಧಿಯಲ್ಲಿ ಪರಿಪಾಲನೆ ಮಾಡಿದ ಮತ್ತು ಇಡೀ ಜಗತ್ತಿಗೆ ತಿಳಿಸಿಕೊಟ್ಟ ಶಾಂತಿ, ಸೌಹಾರ್ಧತೆ ಮತ್ತು ಸಹೋದರತೆ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆಂದು ಡಾ.ಹಂಪಣ್ಣ ಸಜ್ಜನ್ ಹೇಳಿದರು.
ನಗರದ ಸುಮತಿನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಆರಾಧನಾ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಲವು ಮಹನೀಯರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಮತ್ತು ಜೀವನ ಸಂದೇಶವನ್ನು ನೀಡಿದ್ದಾರೆ. ಮಹನೀಯರ ಜಯಂತಿಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗದೇ, ಅವರ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಹನೀಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಎಎಸ್ಪಿ ಕುಮಾರಸ್ವಾಮಿ ಮಾತನಾಡಿ, ಕರುಣೆ, ಅಹಿಂಸೆ, ಸಮಾನತೆ ಸೇರಿದಂತೆ ಭಗವಾನ್ ಮಹಾವೀರರು ಬೋಧನೆ ಮಾಡಿದ ಅಂಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಬದುಕಬೇಕು, ಬೇರೆಯವರನ್ನು ಬದುಕಲು ಬಿಡಬೇಕೆಂಬುವುದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮಹಾವೀರರ ಸಂದೇಶಗಳು ಕೇವಲ ಜೈನ ಧರ್ಮಕ್ಕೆ ಮಾತ್ರ ಸೀಮಿತವಲ್ಲ. ಅವರ ಸಂದೇಶಗಳಿಅದ ಇಡೀ ಮನುಕುಲದ ಉದ್ದಾರವಾಗುತ್ತದೆ ಎಂದರು.
ಪ್ರೇಮಲತಾ ಹರದರ ಉಪನ್ಯಾಸ ನೀಡಿ, ಜಗತ್ತಿನಲ್ಲಿ ಜನರು ಅನುಭವಿಸುತ್ತಿದ್ದ ಸಾಕಷ್ಟು, ತೊಂದರೆಗಳಿಗೆ ಪರಿಹಾರವನ್ನು ನೀಡಿ, ಮಹನೀಯರಲ್ಲಿ ಮಹಾವೀರರು ಕೂಡ ಒಬ್ಬರಾಗಿದ್ದಾರೆ. ಜಗತ್ತನ್ನು ಉತ್ತಮ ರೀತಿಯಲ್ಲಿ ಕೊಂಡೋಯಲು ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದಾರೆ. ಜೊತೆಗೆ ಧಾರ್ಮಿಕ ಕ್ರಾಂತಿಯನ್ನು ಮೂಡಿಸಿದವರಲ್ಲಿ ಭಗವಾನ್ ಮಹಾವೀರರು ಒಬ್ಬರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಮೊದಲು ಭಗವಾನ್ ಮಹಾವೀರ ಜಯಂತಿ ಅಂಗವಾಗಿ ನಗರದಲ್ಲಿ ಅದ್ಧೂರಿ ಮೆರವಣಿಗೆ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಚಾಲನೆ ನೀಡಿದರು. ಎಸ್ಪಿ ಅರುಣಾಂಗ್ಷು ಗಿರಿ.,ಎಎಸ್ಪಿ ಕುಮಾರ ಸ್ವಾಮಿ, ತಹಶೀಲ್ದಾರ್ ಸುರೇಶ ವರ್ಮ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕಾರ್ಯದರ್ಶಿ ಕೃಷ್ಣಾ ಶಾವಂತಗೇರಾ, ಸಮಾಜದ ಪ್ರಮುಖರಾದ ಪ್ರಕಾಶ, ಕಿಶೋರ್, ಮಹಾವೀರ ಹರದರ, ಪ್ರಖರಾಜ, ಅಶ್ವಿನ ಭಾಟಿಯಾ, ಮೋಹನಲಾಲ್, ರಂಜಿತ್ ಕಟಾರಿಯಾ, ರಾಜುಭಾಯಿ ದೇಸಾಯಿ, ಮನ್ನೂಬಾಯಿ, ಅಶೀಕ ಲೋಧ್ರಾ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net