ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿಸರ್ಜಿಸಿ

ಹಟ್ಟಿಯಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ, ರಮೇಶ ಜೆ., ಮೌನೇಶ ಕಡ್ಡೋಣಿ, ಸುರೇಶ್, ಇಮ್ರಾನ್ ಪಾಷಾ, ರಿಯಾಜ್ ಖುರೇಷಿ, ಫಯಾಜ್ ಇತರರಿದ್ದರು.
ಹಟ್ಟಿಯಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ, ರಮೇಶ ಜೆ., ಮೌನೇಶ ಕಡ್ಡೋಣಿ, ಸುರೇಶ್, ಇಮ್ರಾನ್ ಪಾಷಾ, ರಿಯಾಜ್ ಖುರೇಷಿ, ಫಯಾಜ್ ಇತರರಿದ್ದರು.
Published on
ಹಟ್ಟಿಚಿನ್ನದಗಣಿ: ನೀಟ್ ಅಕ್ರಮ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಕಾರ್ಯವೈಖರಿಗೆ ಖಂಡನೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಗುರುವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 
ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ಆರಂಭವಾದ ಪ್ರತಿಭಟನಾ ರ‌್ಯಾಲಿ ಪ್ರಮುಖ ಬೀದಿಗಳಲ್ಲಿ ಸಾಗಿ ಪೊಲೀಸ್ ಠಾಣೆ ತಲುಪಿತು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ಸಲ್ಲಿಸಿದರು. 
ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ ಮಾತನಾಡಿ, ನೀಟ್ ಪರೀಕ್ಷೆ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ವಿಸರ್ಜಿಸಿ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಬೇಕು.
ಶಿಕ್ಷಣ ವ್ಯವಸ್ಥೆ ಮೇಲಿನ ಸಾರ್ವಜನಿಕರ ನಂಬಿಕೆಗೆ ಧಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ನಂತರ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದರು. ಇದರಿಂದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. 
ಎಸ್‌ಎಫ್‌ಐ ಮುಖಂಡರಾದ ರಮೇಶ ಜೆ., ಮೌನೇಶ ಕಡ್ಡೋಣಿ, ದಲಿತ ಸಂಘದ ಸ್ಥಳೀಯ ಘಟಕ ಅಧ್ಯಕ್ಷ ಸುರೇಶ್, ಡಿವೈಎಫ್‌ಐ ಮುಖಂಡರಾದ ಇಮ್ರಾನ್ ಪಾಷಾ, ರಿಯಾಜ್ ಖುರೇಷಿ, ಫಯಾಜ್, ಮೆಹಬೂಬ್, ಮಹಾಂತೇಶ, ಜನವಾದಿ ಮಹಿಳಾ ಸಂಘಟನೆಯ ವನಜಾಕ್ಷಿ, ಸಾಹೀರಾ ಬಾನು, ಶಾಂತಕುಮಾರಿ, ಮುಖಂಡರಾದ ಯಂಕೋಬ್ ಮಿಯ್ಯಪುರ, ರಮೇಶ ಬಾಬು, ಜಮದಗ್ನಿ ಕೋಠಾ, ಬಾಬು ಭೂಪುರ್, ಮಲ್ಲಿಕಾರ್ಜುನ್ ಕಡೇಚೂರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net